‘ಬಾಂಗ್ಲಾದೇಶದ ಕಸ್ಟಮ್ಸ್‌ನಿಂದ ತಮ್ಮ ಲ್ಯಾಂಡ್‌ಪೋರ್ಟ್‌ಗಳಲ್ಲಿ ಕ್ಲಿಯರೆನ್ಸ್ ಕೊರತೆಯಿಂದಾಗಿ, ಎಲ್ಲ ಭೂ ಬಂದರುಗಳಲ್ಲಿ ರಫ್ತು ಮತ್ತು ಆಮದು ಚಟುವಟಿಕೆಗಳು ಸ್ಥಗಿತಗೊಂಡಿವೆ. ಸೋಮವಾರ ಬೆಳಿಗ್ಗೆ ಸ್ವಲ್ಪಮಟ್ಟಿಗಿನ ವ್ಯಾಪಾರ ನಡೆಯಿತು. ಆದರೆ ನಂತರ ಅದು ನಿಂತುಹೋಯಿತು. ಬಾಂಗ್ಲಾದೇಶದ ಗಡಿಗಳನ್ನು ವ್ಯಾಪಾರಕ್ಕೆ ಮುಚ್ಚಲಾಗಿದೆ’ ಎಂದು ಪಶ್ಚಿಮ ಬಂಗಾಳದ ರಫ್ತುದಾರರ ಸಮನ್ವಯ ಸಮಿತಿ ಕಾರ್ಯದರ್ಶಿ ಉಜ್ಜಲ್ ಸಹಾ ಹೇಳಿದ್ದಾರೆ.