ಜೈಪುರ: ಸೋಮವಾರ ಜೈಪುರದಿಂದ ದುಬೈಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಟೇಕ್ ಆಫ್ಗೂ ಮುನ್ನ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ವಿಮಾನವನ್ನು ರದ್ದುಗೊಳಿಸಲಾಗಿದೆ.

ಟೇಕ್ ಆಫ್ಗೂ ಮುನ್ನ ಪೈಲಟ್ ತಾಂತ್ರಿಕ ದೋಷವನ್ನು ಪತ್ತೆ ಮಾಡಿದ್ದಾರೆ.

ವಿಮಾನವು ಬೆಳಿಗ್ಗೆ 6:35ಕ್ಕೆ ಟೇಕ್ ಆಫ್ ಆಗಬೇಕಿತ್ತು. ಅದು ರನ್ವೇಯಲ್ಲಿದ್ದಾಗ, ತಾಂತ್ರಿಕ ದೋಷ ಪೈಲಟ್ ಗಮನಕ್ಕೆ ಬಂದಿತು. ನಂತರ ಟೇಕ್ ಆಫ್ ಅನ್ನು ಸ್ಥಗಿತಗೊಳಿಸಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

189 ಆಸನಗಳ ಬೋಯಿಂಗ್ 737 ಮ್ಯಾಕ್ಸ್ ವಿಮಾನವು ರನ್ವೇಯಿಂದ ಹಿಂತಿರುಗಿದೆ. ತಾಂತ್ರಿಕ ಸಿಬ್ಬಂದಿ ಅದನ್ನು ಪರಿಶೀಲಿಸಿದ್ದಾರೆ.

ಅಹಮದಾಬಾದ್ನಿಂದ ಲಂಡನ್ಗೆ ತೆರಳುತ್ತಿದ್ದ ವಿಮಾನ ಪತನವಾಗಿ 271ಕ್ಕೂ ಅಧಿಕ ಮಂದಿ ಮೃತಪಟ್ಟ ಬಳಿಕ ಏರ್ ಇಂಡಿಯಾದ ಹಲವು ವಿಮಾನಗಳಲ್ಲಿ ತಾಂತ್ರಿಕ ದೋಷದ ಬಗ್ಗೆ ವರದಿಯಾಗುತ್ತಿದೆ. ತಾಂತ್ರಿಕ ಪರಿಶೀಲನೆ ದೃಷ್ಟಿಯಿಂದ ಕಾರ್ಯಾಚರಿಸುತ್ತಿರುವ ವಿಮಾನಗಳ ಸಂಖ್ಯೆಯನ್ನೂ ಏರ್ ಇಂಡಿಯಾ ಕಡಿತಗೊಳಿಸಿದೆ.

19 ದೇಶಿ ಮಾರ್ಗಗಳಲ್ಲಿನ ವಿಮಾನ ಹಾರಾಟವನ್ನು ಜುಲೈ 15ರವರೆಗೆ ತಾತ್ಕಾಲಿಕವಾಗಿ ಕಡಿತಗೊಳಿಸುವ ನಿರ್ಧಾರವನ್ನು ಏರ್ ಇಂಡಿಯಾ ಭಾನುವಾರ ಪ್ರಕಟಿಸಿದೆ.

ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟಿನಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇರಾನ್, ಇರಾಕ್ ಮತ್ತು ಇಸ್ರೇಲ್ನ ವಾಯುಮಾರ್ಗದಲ್ಲಿ ಪ್ರಸ್ತುತ ವಿಮಾನಗಳ ಕಾರ್ಯಾಚರಣೆ ನಡೆಸುವುದಿಲ್ಲ. ಯುಎಇ, ಕತಾರ್, ಒಮಾನ್ ಮತ್ತು ಕುವೈತ್ ಸೇರಿದಂತೆ ವಿವಿಧ ಸ್ಥಳಗಳಿಗೆ ಪರ್ಯಾಯ ಮಾರ್ಗವನ್ನು ಬಳಸಿಕೊಳ್ಳಲಾಗುವುದು. ಯುರೋಪ್ ಮತ್ತು ಉತ್ತರ ಅಮೆರಿಕಕ್ಕೆ ಪ್ರಯಾಣದ ಅವಧಿ ಹೆಚ್ಚಳವಾಗಬಹುದು ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.