ನವದೆಹಲಿ: ’ಚುನಾವಣಾ ಆಯೋಗವು ಆಡಳಿತಾರೂಢ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದು, ಹಿಂದುಳಿದ ವರ್ಗಗಳಿಗೆ ಸೇರಿದವರ ಹೆಸರುಗಳನ್ನೇ ಮತದಾರರ ಪಟ್ಟಿಯಿಂದ ಅಳಿಸಿಹಾಕಿದೆ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೋಮವಾರ ಆರೋಪಿಸಿದ್ದಾರೆ.

ಸಂಸತ್ತಿನ ಆವರಣದಲ್ಲಿ ಸೋಮವಾರ ಮಾತನಾಡಿರುವ ಅವರು, ‘ಮೌರ್ಯ, ಪಾಲ್, ಭಗೇಲ್ ಮತ್ತು ರಾಥೋಡ್ ಸೇರಿದಂತೆ ಹಿಂದುಳಿದ ಸಮುದಾಯಗಳಿಗೆ ಸೇರಿದವರ ಹೆಸರುಗಳನ್ನೇ ಪಟ್ಟಿಯಿಂದ ತೆಗೆದುಹಾಕಿ ಬಿಜೆಪಿಗೆ ಲಾಭ ಮಾಡಿಕೊಟ್ಟಿದೆ’ ಎಂದು ದೂರಿದ್ದಾರೆ.

'ಅವರ ಮತಗಳನ್ನು ಅಳಿಸಲಾಗಿದೆ ಎಂಬುದಷ್ಟೇ ಸತ್ಯ. ಇದೇ ವಿಷಯವನ್ನು ಸಮಾಜವಾದಿ ಪಕ್ಷವು ಈ ಹಿಂದೆಯೂ ಪ್ರಸ್ತಾಪಿಸಿತ್ತು. ಹಿಂದುಳಿದವರ ಮತಗಳನ್ನು ಉದ್ದೇಶಪೂರ್ವಕವಾಗಿಯೇ ಅಳಿಸಿ, ಆ ಮತಗಳು ಬೇರೆಡೆ ಹೋಗುವಂತೆ ಮಾಡಲಾಗಿದೆ’ ಎಂದು ಹೇಳಿದ್ದಾರೆ.
.‘ಇಂಡಿಯಾ’ ಬಣದಿಂದ ಚುನಾವಣಾ ಆಯುಕ್ತ ಜ್ಞಾನೇಶ್ ವಿರುದ್ಧ ವಾಗ್ದಂಡನೆ ಪ್ರಸ್ತಾವನೆ?.ಮತಗಳ್ಳತನ ಆರೋಪಕ್ಕೆ ವಾರದಲ್ಲಿ ಪ್ರಮಾಣಪತ್ರ ಸಲ್ಲಿಸಿ: ರಾಹುಲ್ಗೆ ಚುನಾವಣಾ ಆಯೋಗ.
'ಯಾವೆಲ್ಲಾ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ ಸ್ಥಾನಗಳನ್ನು ಕಡಿಮೆ ಮತಗಳ ಅಂತರದಿಂದ ಕಳೆದುಕೊಂಡಿದೆಯೋ ಅಲ್ಲೆಲ್ಲಾ ಕಡೆ ಮತದಾರರ ಹೆಸರು ಅಳಿಸಿ ಹಾಕಿರುವುದು ಪ್ರಮುಖ ಪಾತ್ರ ವಹಿಸಿದೆ. 2019ರಲ್ಲಿ ಮತ ಹಾಕಿದವರ ಹೆಸರುಗಳು 2022ರ ಚುನಾವಣೆಯಲ್ಲಿ ಅಳಿಸಲಾಗಿದೆ. ಮತದಾರರ ಪಟ್ಟಿಗೆ ಹೆಸರು ಸೇರಿಸಲೂ ನಿರ್ದಿಷ್ಟ ಪ್ರಕ್ರಿಯೆಗಳಿವೆ. ಆದರೆ ಅದೂ ಪಾಲನೆಯಾಗಿಲ್ಲ’ ಎಂದಿದ್ದಾರೆ.

‘ಬೂತ್ ಮಟ್ಟದ ಅಧಿಕಾರಿಗಳು ಮತ್ತು ಮತಗಟ್ಟೆ ಅಧಿಕಾರಿಗಳನ್ನು ಜಾತಿ ಆಧಾರದಲ್ಲಿ ನೇಮಿಸಬಾರದು. ಆದರೆ ಆಡಳಿತಾರೂಢ ಸರ್ಕಾರವು ತನಗೆ ಬೇಕಾದ ಅಧಿಕಾರಿಗಳನ್ನು ಈ ಹುದ್ದೆಗಳಿಗೆ ನೇಮಿಸುತ್ತಿದೆ’ ಎಂದು ಅಖಿಲೇಶ್ ಆಗ್ರಹಿಸಿದ್ದಾರೆ.
.ಚುನಾವಣಾ ಆಯೋಗದ ಅಸಮರ್ಥತೆ, ಪಕ್ಷಪಾತ ಧೋರಣೆ ಬಹಿರಂಗ: ಕಾಂಗ್ರೆಸ್.ದೇಶದಾದ್ಯಂತ ವಿಧಾನಸಭೆ–ಲೋಕಸಭೆ ಚುನಾವಣೆಯಲ್ಲಿ ಮತ ಕಳ್ಳತನ ನಡೆದಿದೆ: ರಾಹುಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.