ಕೋಲ್ಕತ್ತ: ಯಾರಾದರೂ ಯಾವುದರ ಬಗ್ಗೆಯಾದರು ಭೀತಿಗೊಂಡಿದ್ದೀರಾ ಎಂದು ಪ್ರಶ್ನಿಸಿದರೆ ಹೌದು ಎನ್ನುತ್ತೇನೆ. ಹೆದರಿಕೆಯಾಗಲು ಈಗ ಕಾರಣವಿದೆ. ಪ್ರಸ್ತುತ ರಾಷ್ಟ್ರದಲ್ಲಿನ ಪರಿಸ್ಥಿತಿಯೇ ಈ ಭೀತಿಗೆ ಕಾರಣ ಎಂದು ನೊಬೆಲ್ ಪುರಸ್ಕೃತ ಡಾ. ಅಮರ್ತ್ಯ ಸೇನ್ ಕಳವಳ ವ್ಯಕ್ತಪಡಿಸಿದ್ದಾರೆ.

ಕೋಲ್ಕತ್ತದ ಸಾಲ್ಟ್ ಲೇಕ್ ಪ್ರದೇಶದಲ್ಲಿ ಅಮರ್ತ್ಯ ಸಂಶೋಧನಾ ಸಂಸ್ಥೆಯ ಉದ್ಘಾಟನೆಗೆ ಆಗಮಿಸಿದ್ದ ಡಾ. ಆಮರ್ತ್ಯ ಸೇನ್ ಅವರು ಮಾತನಾಡುತ್ತ, ರಾಷ್ಟ್ರವು ಧರ್ಮದ ಆಧಾರದಲ್ಲಿ ವಿಭಜನೆಯಾಗಬಾರದು. ಜನರು ಐಕ್ಯಮತದೆಡೆಗೆ ಸಾಗಬೇಕು ಎಂದರು.

ರಾಷ್ಟ್ರವು ಒಗ್ಗಟ್ಟಿನಿಂದ ಇರಬೇಕು ಎಂದು ಬಯಸುತ್ತೇನೆ. ಐತಿಹಾಸಿಕವಾಗಿ ಉದಾರವಾದಿಯಾಗಿರುವ ರಾಷ್ಟ್ರವು ವಿಭಜನೆಗೊಳ್ಳುವುದನ್ನು ನಾನು ನಿರೀಕ್ಷಿಸುವುದಿಲ್ಲ. ನಾವು ಜೊತೆಯಾಗಿ ಕೆಲಸ ಮಾಡಬೇಕು ಎಂದರು.

ಭಾರತವು ಕೇವಲ ಹಿಂದೂ ಅಥವಾ ಮುಸ್ಲಿಮರಿಗೆ ಸೀಮಿತವಾಗಬಾರದು. ಭಾರತ ಕೇವಲ ಹಿಂದೂಗಳ ರಾಷ್ಟ್ರವಾಗುವುದಿಲ್ಲ. ಅದರಂತೆ ಕೇವಲ ಮುಸ್ಲಿಮರಿಂದ ಭಾರತವಾಗುವುದಿಲ್ಲ. ಎಲ್ಲರೂ ಜೊತೆಗೂಡಿ ಮುಂದುವರಿಯಬೇಕು. ಭಾರತೀಯ ಸಂಪ್ರದಾಯವಾಗಿರುವ ಐಕ್ಯತೆ ಮೇಳೈಸಬೇಕು ಎಂದು ಒತ್ತಿ ಹೇಳಿದರು.

1998 ರಲ್ಲಿ ಡಾ.ಅಮರ್ತ್ಯ ಸೇನ್ ಅವರಿಗೆ ಕಲ್ಯಾಣ ಅರ್ಥಶಾಸ್ತ್ರ (Welfare economy)ಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ನೊಬೆಲ್ ಪ್ರಶಸ್ತಿ ಲಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.