ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈ ಮಳೆ: ನಟ ವಿಷ್ಣು ವಿಶಾಲ್‌ ಮನೆಯಲ್ಲಿ ಸಿಲುಕಿದ್ದ ಅಮೀರ್‌ ಖಾನ್‌ ರಕ್ಷಣೆ

Published 5 ಡಿಸೆಂಬರ್ 2023, 11:36 IST
Last Updated 5 ಡಿಸೆಂಬರ್ 2023, 11:36 IST
ಅಕ್ಷರ ಗಾತ್ರ

ಚೆನ್ನೈ: ಚೆನ್ನೈನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತಮಿಳು ನಟ ವಿಷ್ಣು ವಿಶಾಲ್‌ ಮನೆಯಲ್ಲಿ ಸಿಲುಕಿದ್ದ ಬಾಲಿವುಡ್‌ ನಟ ಅಮೀರ್‌ ಖಾನ್‌ ಅವರನ್ನು 24 ಗಂಟೆಯ ಬಳಿಕ ರಕ್ಷಿಸಲಾಗಿದೆ.

ಚೆನ್ನೈನ ಕರಪಕಮ್‌ ಪ್ರದೇಶದಲ್ಲಿರುವ ವಿಷ್ಣು ವಿಶಾಲ್‌ ಮನೆಯಲ್ಲಿ ಅಮೀರ್‌ ಖಾನ್‌ ಉಳಿದುಕೊಂಡಿದ್ದರು. ಎಡಬಿಡದೆ ಸುರಿದ ಮಳೆಯಿಂದಾಗಿ ಅವರಿರುವ ಪ್ರದೇಶ ಜಲಾವೃತಗೊಂಡು ಮನೆಯಿಂದ ಹೊರಬರಲಾರದೆ ಸಿಲುಕಿಕೊಂಡಿದ್ದರು.

ಮಳೆಯಿಂದಾಗಿ ಮನೆಯ ಸುತ್ತಮುತ್ತ ನೀರು ತುಂಬಿರುವ ಬಗ್ಗೆ ನಟ ವಿಷ್ಣು ವಿಶಾಲ್‌ ಎಕ್ಸ್‌ ತಾಣದಲ್ಲಿ ಹಂಚಿಕೊಂಡಿದ್ದು, ತಕ್ಷಣ ಸಹಾಯಕ್ಕೆ ಧಾವಿಸಿ ರಕ್ಷಿಸಿದ್ದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಇದಕ್ಕೂ ಮೊದಲು ಪೋಸ್ಟ್‌ ಮಾಡಿದ್ದ ಅವರು, ಸಹಾಯಕ್ಕೆ ಕರೆ ಮಾಡಿದ್ದೇನೆ ವಿದ್ಯುತ್‌, ವೈಫೈ, ಮೊಬೈಲ್‌ ನೆಟ್‌ವರ್ಕ್‌ ಕೂಡ ಕಟ್ ಆಗಿದೆ. ಮನೆಯ ಟೆರೆಸ್‌ ಮೇಲೆ ಸಣ್ಣ ಪ್ರಮಾಣದಲ್ಲಿ ಸಿಗ್ನಲ್‌ ದೊರೆತ ಕಾರಣ ಸಹಾಯ ಕೋರಲು ಸಾಧ್ಯವಾಯಿತು ಎಂದು ಬರೆದುಕೊಂಡಿದ್ದರು.

ವಿಷ್ಣು ವಿಶಾಲ್‌, ರಕ್ಷಣಾ ಕಾರ್ಯಾಚರಣೆಯ ಪೋಟೊ ಹಂಚಿಕೊಂಡಿದ್ದಾರೆ. ಅದರಲ್ಲಿ ವಿಷ್ಣು ವಿಶಾಲ್‌ ಸೇರಿದಂತೆ ಅಮೀರ್ ಖಾನ್‌, ಜ್ವಾಲಾ ಗುಟ್ಟಾ ಸಹ ಕಾಣಿಸಿಕೊಂಡಿದ್ದಾರೆ

ತಾಯಿಯ ಚಿಕಿತ್ಸೆಗಾಗಿ ಅಮೀರ್‌ ಖಾನ್‌ ಅವರು ಕೆಲವು ತಿಂಗಳ ಹಿಂದೆ ಚೆನ್ನೈನಲ್ಲಿ ವಾಸ್ತವ್ಯ ಹೂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT