ದಿಬ್ರುಗಢ: 'ಬಾಂಗ್ಲಾದೇಶದ ಅಕ್ರಮ ನುಸುಳಿರುವವರನ್ನು ಗುರುತಿಸಿ, ಹೊರಗಟ್ಟುವುದಕ್ಕಾಗಿ ಮತ್ತೊಮ್ಮೆ ಬಿಜೆಪಿಗೆ ಅಧಿಕಾರ ನೀಡಿ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಸ್ಸಾಂ ಜನರಲ್ಲಿ ಮನವಿ ಮಾಡಿದ್ದಾರೆ. ಇದು, ಕೇಸರಿ ಪಕ್ಷವು 2014ರ ಲೋಕಸಭೆ ಚುನಾವಣೆ ಹಾಗೂ ಅದಕ್ಕೂ ಮೊದಲಿನಿಂದಲೂ ನೀಡುತ್ತಿರುವ ಪ್ರಮುಖ ಭರವಸೆಯಾಗಿದೆ.

126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಇದೇ ವರ್ಷ ಏಪ್ರಿಲ್ – ಮೇ ಹೊತ್ತಿಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಅಮಿತ್ ಶಾ ಪ್ರಯತ್ನ ನಡೆಸಿದ್ದಾರೆ.

ಅಸ್ಸಾಂನ ದಿಬ್ರುಗಢ ಹಾಗೂ ಧೇಮಾಜಿಗೆ ಶುಕ್ರವಾರ ಭೇಟಿ ನೀಡಿದ್ದ ಶಾ, ಎರಡೂ ಕಡೆ ಅಕ್ರಮ ವಲಸಿಗರ ವಿಚಾರ ಪ್ರಸ್ತಾಪಿಸಿದ್ದಾರೆ.

'ಕಳೆದ 10 ವರ್ಷಗಳ ಅಧಿಕಾರಾವಧಿಯಲ್ಲಿ ಬಿಜೆಪಿ ಸರ್ಕಾರವು ಒಳನುಸುಳುವಿಕೆಗೆ ಕಡಿವಾಣ ಹಾಕಿದೆ. ಆದರೆ, ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ದೇಶದೊಳಗೆ ನುಸುಳಿರುವ ಹಾಗೂ ದೇಶದ ನಾಗರಿಕರಿಗೆ ಬೆದರಿಕೆಯಾಗಿ ಪರಿಣಮಿಸಿರುವವರನ್ನು ನಾವು ಗುರುತಿಸುತ್ತೇವೆ. ಮೂರನೇ ಅವಧಿಗೆ ನಮ್ಮನ್ನು ಆಯ್ಕೆ ಮಾಡಿದರೆ, ಅಕ್ರಮವಾಗಿ ನೆಲೆಸಿರುವ ಯಾರನ್ನೂ ಬಿಡುವುದಿಲ್ಲ. ಎಲ್ಲರನ್ನೂ ಗುರುತಿಸಿ ಹೊರಗಟ್ಟುತ್ತೇವೆ ಎಂಬ ಭರವಸೆ ನೀಡುತ್ತೇನೆ' ಎಂದಿದ್ದಾರೆ.

ದಿಬ್ರುಗಢದಲ್ಲಿ ಎರಡನೇ ವಿಧಾನಸಭಾ ಕಟ್ಟಡದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಶಾ, ಧೇಮಾಜಿಯಲ್ಲಿ ಪ್ರಮುಖ ಬುಡಕಟ್ಟು 'ಮಿಸಿಂಗ್' ಸಮುದಾಯದ 10ನೇ ಯುವಜನೋತ್ಸವದಲ್ಲಿ ಪಾಲ್ಗೊಂಡರು.

ಬಿಜೆಪಿಯು ನುಸುಳುಕೋರರು ಎಂದು ಪರಿಗಣಿಸಿರುವ 'ಬಂಗಾಳಿ ಮಾತನಾಡುವ ಮುಸ್ಲಿಮರನ್ನು' ಗುರಿಯಾಗಿಸಿ ನಡೆಯುತ್ತಿರುವ ತೆರವು ಕಾರ್ಯಾಚರಣೆಯನ್ನುದ್ದೇಶಿಸಿ, 'ಅಸ್ಸಾಂನಲ್ಲಿ ಅಕ್ರಮ ಒಳನುಸುಳುವಿಕೆಗೆ ದಶಕಗಳಿಗೂ ಹೆಚ್ಚು ಸಮಯದಿಂದ ಅವಕಾಶ ಕಲ್ಪಿಸಿದ್ದ ಕಾಂಗ್ರೆಸ್ ಪಕ್ಷ, ಒಳನುಸುಳುಕೋರರನ್ನು ಮತಬ್ಯಾಂಕ್ ಮಾಡಿಕೊಂಡು ಅಧಿಕಾರದಲ್ಲಿ ಉಳಿದಿತ್ತು. ಆದರೆ, ಇಂದು ನಮ್ಮ ಪಕ್ಷದ ಸರ್ಕಾರವು ಬಾಂಗ್ಲಾ ನುಸುಳುಕೋರರು ಅತಿಕ್ರಮಿಸಿದ್ದ 1.26 ಲಕ್ಷ ಹೆಕ್ಟೆರ್ ಅರಣ್ಯ ಹಾಗೂ ಸರ್ಕಾರಿ ಭೂಮಿಯನ್ನು ತೆರವುಗೊಳಿಸಿದೆ' ಎಂದು ಮಾಹಿತಿ ನೀಡಿದ್ದಾರೆ.

'ನುಸುಳುಕೋರರು ಶ್ರೀಮಂತ ಶಂಕರದೇವ್ ಅವರ ಜನ್ಮಸ್ಥಳವಾದ ಕಾಜಿರಂಗ ರಾಷ್ಟ್ರೀಯ ಉದ್ಯಾನವನವನ್ನೇ ಬಿಡಲಲ್ಲ. ನಮ್ಮ ಘೇಂಡಾಮೃಗಗಳನ್ನು ಗುರಿಯಾಗಿಸಿ ಕೊಂದಿದ್ದಾರೆ. ನಮ್ಮವರಿಗೆ ಎದುರಾಗಿರುವ ಬೆದರಿಕೆ ಕೊನೆಯಾಗಲೇಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಅಸ್ಸಾಂ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ' ಎಂದು ಎಚ್ಚರಿಸಿದ್ದಾರೆ.

ದೇಮಾಜಿಯಲ್ಲಿ ಮಾತನಾಡುತ್ತಾ, 'ಧುಬ್ರಿ, ಗೋಲ್ಪರಾ, ದರ್ರಾಂಗ್, ಬೊಂಗಾಯ್ಗಾಂವ್, ಮೊರಿಗಾಂವ್ ಹಾಗೂ ಬರ್ಪೆಟಾ ಜಿಲ್ಲೆಗಳಲ್ಲಿ ನುಸುಳುಕೋರರು ಪ್ರಬಲವಾಗಿದ್ದಾರೆ' ಎಂದು ಉಲ್ಲೇಖಿಸಿದ್ದಾರೆ. 'ಈ ಪ್ರದೇಶದಲ್ಲಿ ಅತ್ಯಲ್ಪ ಸಂಖ್ಯೆಯಲ್ಲಿದ್ದ ಅವರು (ನುಸುಳುಕೋರರು), ಇದೀಗ ಭಾರಿ ಸಂಖ್ಯೆಯಲ್ಲಿದ್ದಾರೆ' ಎಂದಿದ್ದಾರೆ. ಹಾಗೆಯೇ, 'ಇನ್ನುಮುಂದೆ ನೀವು ಶಸ್ತ್ರಾಸ್ತ್ರಗಳನ್ನು ಹಿಡಿದು ಗಡಿ ಕಾಯಬೇಕಿಲ್ಲ. ಅಂತಹ ಕೆಲಸವನ್ನು ಹಿಮಂತ ಬಿಸ್ವಾ ಶರ್ಮಾ ಸರ್ಕಾರ ಮಾಡಲಿದೆ. ಅದಕ್ಕಾಗಿ, ನೀವು ಬಿಜೆಪಿ ಮತ್ತೊಮ್ಮೆ ಮತ ನೀಡಿ ಸಾಕು' ಎಂದು ಕರೆ ನೀಡಿದ್ದಾರೆ.

ವಿದೇಶಿಯರ ಹೆಸರಲ್ಲಿ ರಾಜಕೀಯ: ಟೀಕೆ
ಅಸ್ಸಾಂನಲ್ಲಿ ವಿದೇಶಿಗರ ಹೆಸರಿನಲ್ಲಿ ಹಿಂದಿನಿಂದಲೂ ರಾಜಕೀಯ ನಡೆಯುತ್ತಿದೆ. ಚುನಾವಣೆಗಳು ಬಂದಾಗ ತೀವ್ರಗೊಳ್ಳುತ್ತದೆ. ನುಸುಳುಕೋರರನ್ನು ಹೊರದಬ್ಬುವುದಾಗಿ ಬಿಜೆಪಿ 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲೇ ಭರವಸೆ ನೀಡಿತ್ತು. ಆದರೆ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾಗಿ 12 ವರ್ಷ ಕಳೆದರೂ, ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೇರಿ 10 ವರ್ಷವಾದರೂ ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.