ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಿಗಾಗಿ ಇಲ್ಲದವರು ಯಾವ ಕೆಲಸಕ್ಕೂ ಸಲ್ಲರು: ಶಿವಸೇನಾ ವಿರುದ್ಧ ಶಿಂದೆ ಟೀಕೆ

Published 23 ಜನವರಿ 2024, 11:10 IST
Last Updated 23 ಜನವರಿ 2024, 11:10 IST
ಅಕ್ಷರ ಗಾತ್ರ

ನವದೆಹಲಿ: ರಾಮಮಂದಿರ ಉದ್ಘಾಟನೆ ವಿಚಾರವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಶಿವಸೇನಾ (ಯುಬಿಟಿ) ಬಣದ ನಡುವಿನ ವಾಕ್ಸಮರ ಜೋರಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರ ಸಿಎಂ ಏಕನಾಥ ಶಿಂದೆ, ‘ರಾಮಮಂದಿರವನ್ನು ವಿರೋಧಿಸುವವರಿಗೆ ಶ್ರೀರಾಮನ ಹೆಸರು ಉಚ್ಛರಿಸುವ ಹಕ್ಕಿಲ್ಲ. ಬಾಳಾಸಾಹೇಬ್ ಠಾಕ್ರೆ ಸೇರಿದಂತೆ ಕೋಟ್ಯಂತರ ಭಕ್ತರ ಕನಸನ್ನು ಪ್ರಧಾನಿ ಮೋದಿ ನನಸಾಗಿಸಿದ್ದಾರೆ. ಇದಕ್ಕೆ ಅಯೋಧ್ಯೆಯ ರಾಮಮಂದಿರದಲ್ಲಿ ನಡೆದ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವೇ ಸಾಕ್ಷಿ. ಜನವರಿ 22 ಐತಿಹಾಸಿಕ ದಿನವಾಗಿರಲಿದೆ’ ಎಂದು ಹೇಳಿದ್ದಾರೆ.

ಇದೇ ವೇಳೆ ‘ರಾಮನಿಗಾಗಿ ಇಲ್ಲದವರು ಯಾವ ಕೆಲಸಕ್ಕೂ ಸಲ್ಲರು’ ಎಂದು ಶಿವಸೇನಾ ನಾಯಕರ ವಿರುದ್ಧ ಶಿಂದೆ ವಾಗ್ದಾಳಿ ನಡೆಸಿದ್ದಾರೆ.

ಸಂಜಯ್ ರಾವುತ್‌ ಹೇಳಿದ್ದೇನು?

ಸಮಾವೇಶವೊಂದರಲ್ಲಿ ಮಾತನಾಡಿರುವ ಶಿವಸೇನಾ (ಯುಟಿಬಿ) ಸಂಸದ ಸಂಜಯ್ ರಾವುತ್‌, ‘ಒಂದು ವೇಳೆ ಶಿವಸೇನಾ ಇಲ್ಲದೇ ಹೋಗಿದ್ದರೆ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸಾಧ್ಯವಾಗುತ್ತಿರಲಿಲ್ಲ’ ಎಂದು ಹೇಳಿದ್ದಾರೆ.

‘ನಮಗೂ ರಾಮನಿಗೂ ಭಾರಿ ಹಳೆಯ ಸಂಬಂಧವಿದೆ. ರಾಮನೊಂದಿಗೆ ಶಿವಸೇನಾದ ಸಂಬಂಧ ತೀವ್ರ ಭಾವನಾತ್ಮಕವಾದುದು. ಅದು ಯಾವುದೇ ಪಕ್ಷ ಅಥವಾ ವ್ಯಕ್ತಿಗೆ ಸಂಬಂಧಿಸಿದಲ್ಲ. ಶ್ರೀರಾಮನೊಂದಿಗೆ ಯಾರಿಗಾದರೂ ಹಳೇಯ ಸಂಬಂಧ ಇದ್ದರೆ ಅದು ಶಿವಸೇನಾಗೆ ಮಾತ್ರ’ ಎಂದು ಅವರು ನುಡಿದಿದ್ದಾರೆ.

‘ಒಂದು ವೇಳೆ ಶಿವಸೇನಾ ಇಲ್ಲದಿದ್ದರೆ, ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರಲಿಲ್ಲ. ಶಿವಸೇನಾದ ಹುಲಿಗಳು ತೋರಿಸಿದ ಧೈರ್ಯದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಣ ಪ್ರತಿಷ್ಠಾಪನೆ ಮಾಡುವಂತಾಯಿತು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT