ಬಿಜೆಪಿಯಿಂದ ಇಲ್ಲಿನ ಗೋಪಾಲ್ ಮೈದಾನದಲ್ಲಿ ಆಯೋಜಿಸಿದ್ದ ‘ಪರಿವರ್ತನ್ ಮಹಾರ‍್ಯಾಲಿ’ ಉದ್ದೇಶಿಸಿ ಮಾತನಾಡಿದ ಅವರು, ‘ನೆರೆರಾಷ್ಟ್ರಗಳಿಂದ ಬರುತ್ತಿರುವ ನುಸುಳುಕೋರರು ಜಾರ್ಖಂಡ್ ಪಾಲಿಗೆ ದೊಡ್ಡ ಆತಂಕ ತಂದೊಡ್ಡುತ್ತಿದ್ದು, ಸಂಥಾಲ್ ಪರಗಣ, ಕೊಲ್ಹಾನ್ ಪ್ರಾಂತ್ಯದಲ್ಲಿ ಭೌಗೋಳಿಕ ಚಿತ್ರಣವನ್ನೇ ಬದಲಾಯಿಸುತ್ತಿದ್ದಾರೆ. ರಾಜ್ಯದ ಬುಡಕಟ್ಟು ಸಮುದಾಯಗಳ ಜನಸಂಖ್ಯೆ ಕುಸಿತವಾಗುತ್ತಿದೆ. ನುಸುಳುಕೋರರು ಪಂಚಾಯತ್ ವ್ಯವಸ್ಥೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದು, ಜನರ ಭೂಮಿ ಕಸಿದುಕೊಂಡು, ರಾಜ್ಯದ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ’ ಎಂದು ಕಿಡಿಕಾರಿದರು.