ತಿರುವನಂತಪುರ: ಸರ್ಕಾರಿ ಕಾರ್ಯಕ್ರಮದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಅವರ ಒತ್ತಾಯವನ್ನು ಟೀಕಿಸಿರುವ ಸಿಪಿಐ (ಎಂ)ನ ಮುಖವಾಣಿ ದೇಶಾಭಿಮಾನಿ, ‘ರಾಜಭವನವು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಶಾಖೆ ಅಲ್ಲ’ ಎಂದು ಟೀಕಿಸಿದೆ.

ಕೇರಳದ ರಾಜಭವನದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದನ್ನು ಕಾರ್ಯಕ್ರಮ ಪಟ್ಟಿಗೆ ಸೇರಿಸಲು ರಾಜಭವನ ಒತ್ತಾಯಿಸಿತ್ತು. ಆದರೆ ಅದನ್ನು ನಿರಾಕರಿಸಿ, ಕಾರ್ಯಕ್ರಮವನ್ನು ರಾಜ್ಯ ಕೃಷಿ ಇಲಾಖೆ ಬೇರೆಡೆಗೆ ಸ್ಥಳಾಂತರಿಸಿತ್ತು.

ಈ ಘಟನೆಯು ರಾಜ್ಯಪಾಲ ಅರ್ಲೇಕರ್ ಮತ್ತು ಮಾರ್ಕ್ಸಿಸ್ಟ್ ಪಕ್ಷ ನೇತೃತ್ವದ ಎಲ್ಡಿಎಫ್ ಸರ್ಕಾರದ ನಡುವಿನ ಜಟಾಪಟಿಗೆ ಕಾರಣವಾಗಿದೆ. ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ರಾಜಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅರ್ಲೇಕರ್ ಅವರು ಭಾರತ ಮಾತಾ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದಾರೆ.

ಆರ್ಎಸ್ಎಸ್ ಸಿದ್ಧಾಂತವನ್ನು ಪ್ರಚಾರ ಮಾಡಲು ರಾಜಭವನವನ್ನು ಬಳಕೆ ಮಾಡುವ ಮೂಲಕ ಅರ್ಲೇಕರ್ ಅವರು ದೇಶದ ಸಂವಿಧಾನಕ್ಕೆ ಬಹಿರಂಗ ಸವಾಲೆಸೆದಿದ್ದಾರೆ. ಸಾಂವಿಧಾನಿಕ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದಷ್ಟೇ ಇದನ್ನು ಹೇಳಬಹುದು. ರಾಜಭವನದಲ್ಲಿ ಭಾರತ ಮಾತಾ ಭಾವಚಿತ್ರವಿಟ್ಟ ಕಾರ್ಯಕ್ರಮದಿಂದ ಹೊರನಡೆದ ಶಿಕ್ಷಣ ಸಚಿವ ವಿ.ಶಿವನಕುಟ್ಟಿ ಅವರ ನಿರ್ಧಾರವನ್ನು ದೇಶಾಭಿಮಾನಿ ಶ್ಲಾಘಿಸಿದೆ.

‘ಸಂವಿಧಾನವೇ ಈ ದೇಶದ ಬೆನ್ನೆಲುಬು. ದೇಶದ ಇನ್ಯಾವುದೇ ಸಂಗತಿ ಇದಕ್ಕಿಂತ ಮೇಲಿಲ್ಲ. ರಾಜಭವನದ ನಡೆಯನ್ನು ಯಾವುದೇ ಜಾತ್ಯತೀತ ಮನಸ್ಸುಗಳು ಒಪ್ಪುವುದಿಲ್ಲ. ಆರ್ಎಸ್ಎಸ್ನ ರಾಷ್ಟ್ರವಾದವನ್ನು ರಾಜ್ಯಗಳು ಒಪ್ಪಲು ಸಾಧ್ಯವಿಲ್ಲ. ರಾಜಭವನದ ಈ ಕ್ರಮವನ್ನು ಪ್ರಜಾಪ್ರಭುತ್ವ ಪ್ರೇಮಿಗಳು ಇಷ್ಟಪಡುವುದಿಲ್ಲ. ದೇಶಪ್ರೇಮಿಗಳಾದವರು ಇದನ್ನು ಅರ್ಲೇಕರ್ ಅವರಿಗೆ ತಿಳಿಸಬೇಕು’ ಎಂದು ಸಂಪಾದಕೀಯ ಹೇಳಿದೆ.

ರಾಜಭವನದ ನಿರ್ಧಾರವನ್ನು ಕೃಷಿ ಸಚಿವ ಪಿ. ಪ್ರಸಾದ್ ಅವರೂ ಧಿಕ್ಕರಿಸಿ ಸಭಾತ್ಯಾಗ ಮಾಡಿದ್ದರು. ರಾಜಕೀಯದಲ್ಲಿ ಧರ್ಮ ಮತ್ತು ಧರ್ಮದಲ್ಲಿ ರಾಜಕೀಯ ಬೆರೆಯುವುದು ದೇಶದಲ್ಲಿ ಇಂದು ಸಾಮಾನ್ಯ ಎಂಬಂತಾಗಿದೆ. ಕೇಸರಿ ಧ್ವಜ ಹಿಡಿದ ಮಹಿಳೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದು ಆರ್ಎಸ್ಎಸ್ನ ಹಿಂದು ರಾಷ್ಟ್ರದ ಪರಿಕಲ್ಪನೆಯನ್ನು ಹೇರುವುದಾಗಿದೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ.

ಸ್ಟೂಡೆಂಟ್ ಫೆಡರೇಷನ್ ಆಫ್ ಇಂಡಿಯಾದ ಸದಸ್ಯರು ಕೇರಳ ವಿಶ್ವವಿದ್ಯಾಲಯದ ಸಂಸ್ಕೃತ ಕಾಲೇಜಿನ ಎದುರು ಶನಿವಾರ ಪ್ರತಿಭಟನೆ ನಡೆಸಿ, ‘ರಾಜಭವನ ಆರ್ಎಸ್ಎಸ್ನ ಖಾಸಗಿ ಆಸ್ತಿಯಲ್ಲ’ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ರಾಜ್ಯಪಾಲ ಅರ್ಲೇಕರ್ ವಿರುದ್ಧ ಕಾಂಗ್ರೆಸ್ ಮತ್ತು ಸಿಪಿಐ ಕೂಡಾ ಗುಡುಗಿವೆ. ‘ಅರ್ಲೇಕರ್ ಅವರು ಸ್ವಯಂಸೇವಕರಂತೆ ವರ್ತಿಸುತ್ತಿದ್ದು, ರಾಜಭವನವನ್ನು ಅವರ ಖಾಸಗಿ ಗೃಹ ಕಚೇರಿ ಮತ್ತು ಆರ್ಎಸ್ಎಸ್ ಘಟಕವನ್ನಾಗಿ ಮಾಡಲು ಹೊರಟಿದ್ದಾರೆ’ ಎಂದು ಆರೋಪಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.