ಪಟ್ನಾ: ಬಿಹಾರದ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಬಾರಿ ಅಧಿಕಾರದ ಗದ್ದುಗೆ ಏರುವ ಆತ್ಮವಿಶ್ವಾಸದಲ್ಲಿರುವ ಆರ್ಜೆಡಿ ಪಕ್ಷದ ಹಿರಿಯ ನಾಯಕ ಲಾಲೂ ಪ್ರಸಾದ್ ಯಾದವ್ ಅವರು ಚುನಾವಣೆ ಹೊಸ್ತಿಲಲ್ಲೇ ಮೂರು ಪ್ರಮುಖ ಕದನಗಳನ್ನು ಎದುರಿಸುತ್ತಿದ್ದಾರೆ.

ಯುಪಿಎ–1ರ ಅವಧಿಯಲ್ಲಿ ರೈಲು ಖಾತೆ ಸಚಿವರಾಗಿದ್ದಾಗ ನಡೆದಿದೆ ಎನ್ನಲಾದ ಐಆರ್ಸಿಟಿಸಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದ ನ್ಯಾಯಾಲಯದ ಆದೇಶ ಅಕ್ಟೋಬರ್ನಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ.

ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಿಂದ (NDA) ಅಧಿಕಾರವನ್ನು ಕಸಿದುಕೊಂಡು ತಮ್ಮ ಪುತ್ರ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಗಾದಿಯಲ್ಲಿ ಕೂರಿಸುವ ಮತ್ತೊಂದು ಹೋರಾಟವನ್ನು ಅವರು ನಡೆಸುತ್ತಿದ್ದಾರೆ.

‘ಪರಿವಾರ‘ದೊಳಗೆ ಮತ್ತೊಂದು ಯುದ್ಧವನ್ನೂ ಲಾಲೂ ಪ್ರಸಾದ್ ಯಾದವ್ ಎದುರಿಸುತ್ತಿದ್ದಾರೆ. ತಮ್ಮ ಪುತ್ರಿ ರೋಹಿಣಿ ಆಚಾರ್ಯ ಅವರು ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದಾರೆ. ತಮ್ಮ ಸೋದರರಾದ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ಹಾಗೂ ಸೋದರಿ ಮೀಸಾ ಭಾರ್ತಿ (ಹಾಲಿ ಲೋಕಸಭಾ ಸದಸ್ಯ) ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಅನ್ಫಾಲೊ ಮಾಡುವ ಮೂಲಕ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ತೇಜಸ್ವಿ ಅವರ ಆಪ್ತ ಹಾಲಿ ರಾಜ್ಯಸಭಾ ಸದಸ್ಯ ಸಂಜಯ್ ಯಾದವ್ ಕಾರಣ ಎಂದೂ ಹೇಳಲಾಗುತ್ತಿದೆ. ಇದರಿಂದ ಲಾಲೂ ಪ್ರಸಾದ್ ಯಾದವ್ ಅವರು ಕುಟುಂಬದೊಳಗಿನ ಕದನವನ್ನೂ ಎದುರಿಸುತ್ತಿದ್ದಾರೆ.

ಬರಲಿರುವ ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ರೋಹಿಣಿ ವ್ಯಕ್ತಪಡಿಸಿದ್ದರು. ಆದರೆ ಅದಕ್ಕೆ ತೇಜಸ್ವಿ ತಣ್ಣೀರೆರಚಿದರು. ಇದಕ್ಕೆ ಸಂಜಯ್ ಯಾದವ್ ಕಾರಣ ಎಂದೇ ಹೇಳಲಾಗುತ್ತಿದೆ. ಈ ವಿವಾದದಲ್ಲಿ ಲಾಲೂ ಪ್ರಸಾದ್ ಅವರು ತಮ್ಮ ಮಗನ ಪರವಾಗಿ ನಿಂತರು ಎಂದು ಅಸಮಾಧಾನಗೊಂಡ ರೋಹಿಣಿ ತನ್ನ ಕುಟುಂಬ ಸದಸ್ಯರನ್ನು ಅನುಸರಿಸದಿರಲು ತೀರ್ಮಾನಿಸಿದ್ದಾರೆ.

ತಮ್ಮ ಪತಿ ಶಮ್ಷೇರ್ ಸಿಂಗ್, ಕವಿ ರಾಹತ್ ಇಂದೋರಿ ಮತ್ತು ಮಾಧ್ಯಮ ಸಂಸ್ಥೆಗಳನ್ನು ಮಾತ್ರ ರೋಹಿಣಿ ಸದ್ಯ ಫಾಲೊ ಮಾಡುತ್ತಿದ್ದಾರೆ.

‘ನನಗಾಗಿ ಅಥವಾ ಮತ್ತಾರಿಗಾದರೂ ನಾನು ನೆರವು ಕೇಳಿದ್ದರೆ ಅಥವಾ ನನ್ನ ತಂದೆಗೆ ನಾನು ಮೂತ್ರಪಿಂಡ ದಾನ ಮಾಡಿರುವುದೇ ಸುಳ್ಳು ಎಂದು ಸಾಬೀತುಪಡಿಸಿದರೆ ರಾಜಕೀಯವಾಗಿ ಮತ್ತು ಸಾರ್ವಜನಿಕ ಬದುಕಿನಿಂದಲೇ ನಿವೃತ್ತಿ ಘೋಷಿಸುತ್ತೇನೆ’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ತಮ್ಮ ಕುಟುಂಬದವರ ವಿರುದ್ಧವೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಾರು ರೋಹಿಣಿ ಆಚಾರ್ಯ..?

ಎಂಬಿಬಿಎಸ್ ಪದವೀಧರೆಯಾದ ರೋಹಿಣಿ ಅವರು ಸಿಂಗಾಪೂರದಲ್ಲಿ ತಮ್ಮ ಪತಿಯೊಂದಿಗೆ ಗೃಹಿಣಿಯಾಗಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಸರನ್ ಕ್ಷೇತ್ರದಿಂದ (ಲಾಲೂ ಪ್ರಸಾದ್ ಅವರು 1977ರಿಂದ ನಾಲ್ಕು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು) ಸ್ಪರ್ಧಿಸಿ ಸುದ್ದಿಯಾದರು. ಆ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ರಾಜೀವ್ ಪ್ರತಾಪ್ ರೂಡಿ ಅವರ ವಿರುದ್ಧ ಪರಾಭವಗೊಂಡರು. ಅಲ್ಲಿಂದ ರಾಜಕೀಯದಿಂದ ಸ್ವಲ್ಪ ದೂರವೇ ಇದ್ದ ಅವರು, ರಾಹುಲ್ ಗಾಂಧಿ ಅವರ ಇತ್ತೀಚಿನ ‘ಮತದಾರರ ಅಧಿಕಾರ ಯಾತ್ರೆ’ಯಲ್ಲಿ ಕಾಣಿಸಿಕೊಂಡಿದ್ದರು.

ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ತಮ್ಮ ತಂದೆ ಲಾಲೂ ಪ್ರಸಾದ್ ಯಾದವ್ ಅವರಿಗೆ 2022ರಲ್ಲಿ ನಡೆದ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರೋಹಿಣಿ ಅವರು ತಮ್ಮದೇ ಮೂತ್ರಪಿಂಡವನ್ನು ದಾನ ಮಾಡುವ ಮೂಲಕ ಆರ್ಜೆಡಿ ಮುಖ್ಯಸ್ಥರ ಮರುಜನ್ಮಕ್ಕೆ ಕಾರಣರಾಗಿದ್ದರು.

ಸೆಪ್ಟೆಂಬರ್ನಲ್ಲಿ ನಡೆದ ಪಕ್ಷದ ರ್ಯಾಲಿ ಸಂದರ್ಭದಲ್ಲಿ ರಥದಲ್ಲಿ ಮುಂದಿನ ಆಸನದಲ್ಲಿ ತೇಜಸ್ವಿ ಯಾದವ್ ಅವರು ತಮ್ಮ ತಂದೆಯ ಬದಲು ಆಪ್ತ ಸಂಜಯ್ ಯಾದವ್ ಅವರನ್ನು ಕೂರಿಸಿಕೊಂಡಿದ್ದಕ್ಕೆ ರೋಹಿಣಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ಅವರ ಕುಟುಂಬದೊಳಗೆ ವೈಮನಸ್ಸಿಗೂ ಕಾರಣವಾಗಿತ್ತು. ಸಂಜಯ್ ವಿರುದ್ಧದ ಅವರ ಕೋಪದಿಂದಾಗಿ ಅವರ ರಾಜಕೀಯ ಆಕಾಂಕ್ಷೆಗಳಿಗೂ ಪೆಟ್ಟು ಬಿದ್ದಿತು ಎಂದು ಹೇಳಲಾಗುತ್ತಿದೆ.

ರಾಜಕೀಯ ಮಹಾತ್ವಾಕಾಂಕ್ಷೆಯನ್ನು ರೋಹಿಣಿ ನಿರಾಕರಿಸಿದ್ದಾರೆ. ಸಿಂಗಾಪುರದ ಆಸ್ಪತ್ರೆಯಲ್ಲಿ ತನ್ನ ತಂದೆಗೆ ಮೂತ್ರಪಿಂಡ ದಾನ ಮಾಡುವ ಸಂದರ್ಭದಲ್ಲಿ ತೆಗೆದ ಚಿತ್ರವನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ಅವರು, ‘ತಮ್ಮ ಜೀವವನ್ನೇ ಅಂಗೈನಲ್ಲಿ ಹಿಡಿದುಕೊಂಡವರು ದೊಡ್ಡ ತ್ಯಾಗಗಳನ್ನು ಮಾಡುವ ಗುಣಗಳನ್ನು ಹೊಂದಿರುತ್ತಾರೆ. ಅವರ ರಕ್ತದಲ್ಲೇ ನಿರ್ಭೀತಿ ಮತ್ತು ಸ್ವಾಭಿಮಾನ ಹರಿಯುತ್ತಿರುತ್ತದೆ. ಮಗಳಾಗಿ ಮತ್ತು ಸೋದರಿಯಾಗಿ ನಾನು ನನ್ನ ಕರ್ತವ್ಯ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ. ನನಗೆ ಯಾವುದೇ ಅಧಿಕಾರದ ದಾಹ ಇಲ್ಲ. ಯಾವುದೇ ರಾಜಕೀಯ ಮಹತ್ವಾಕಾಂಕ್ಷೆಯೂ ಇಲ್ಲ. ನನಗೆ ನನ್ನ ಸ್ವಾಭಿಮಾನ ಅತ್ಯಂತ ಮುಖ್ಯವಾದದ್ದು’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.