ಪಟ್ನಾ: ವಿರೋಧ ಪಕ್ಷದ ನಾಯಕರಿಗೆ ಬಿಹಾರದ ಅಭಿವೃದ್ಧಿ ಬಗ್ಗೆ ಯಾವುದೇ ಕಾರ್ಯಸೂಚಿ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು (ಶುಕ್ರವಾರ) ಆರೋಪಿಸಿದ್ದಾರೆ.

ಲಾಲೂ ಪ್ರಸಾದ್ ಹಾಗೂ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಅಮಿತ್ ಶಾ, ಆರ್ಜೆಡಿ-ಕಾಂಗ್ರೆಸ್ ಮೈತ್ರಿಯು ರಾಜ್ಯದಲ್ಲಿ ನುಸುಳುಕೋರರನ್ನು ಬೆಂಬಲಿಸುವುದನ್ನು ಬಿಟ್ಟರೆ ಬಡಜನರಿಗಾಗಿ ಬೇರೆ ಏನನ್ನೂ ಮಾಡಿಲ್ಲ ಎಂದು ಟೀಕಿಸಿದ್ದಾರೆ.

ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಸೋನಿಯಾ ಗಾಂಧಿ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಲಾಲೂ ಹಾಗೂ ಸೋನಿಯಾ ತಮ್ಮ ಪುತ್ರರ ಬಗ್ಗೆ ಮಾತ್ರ ಕಾಳಜಿ ಹೊಂದಿದ್ದಾರೆ. ಬಿಹಾರದ ಅಭಿವೃದ್ಧಿ ಬಗ್ಗೆ ಯೋಚನೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ಎನ್ಡಿಎಗೆ ಇನ್ನೂ ಐದು ವರ್ಷಗಳವರೆಗೆ ಜನಾದೇಶ ನೀಡಿ. ಬಿಹಾರವನ್ನು ಅಭಿವೃದ್ಧಿ ಹೊಂದಿದ ರಾಜ್ಯಗಳ ಪಟ್ಟಿಗೆ ಸೇರ್ಪಡೆಗೊಳಿಸಲಾಗುವುದು. ರಾಜ್ಯವನ್ನು ಪ್ರವಾಹ ಮುಕ್ತಗೊಳಿಸಲಿದ್ದೇವೆ ಎಂದು ಭರವಸೆ ನೀಡಿದ್ದಾರೆ.
.ದೆಹಲಿಯಲ್ಲಿ ಮತ ಹಾಕಿದ್ದ ಬಿಜೆಪಿ ನಾಯಕರಿಂದ ಬಿಹಾರದಲ್ಲೂ ಮತ ಚಲಾವಣೆ: ರಾಹುಲ್.ಮತ್ತೆ ‘ಜಂಗಲ್ ರಾಜ್’ ಆಡಳಿತ ಬರದಂತೆ ತಡೆಯಲು ಕಮಲದ ಬಟನ್ ಒತ್ತಿ: ಅಮಿತ್ ಶಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.