ಪಾಟ್ನಾ: ಚುನಾವಣಾ ಆಯೋಗದ ಸಲಹೆಯಂತೆ ಹೊಸದಾಗಿ 12 ಸಾವಿರ ಹೊಸ ಮತದಾನ ಕೇಂದ್ರಗಳನ್ನು ರಚನೆ ಮಾಡಲಾಗಿದೆ ಎಂದು ಬಿಹಾರ ಸರ್ಕಾರವು ಶನಿವಾರ ತಿಳಿಸಿದೆ.

ಬಿಹಾರದಲ್ಲಿ ಒಟ್ಟು 77,895 ಮತದಾನ ಕೇಂದ್ರಗಳಿದ್ದವು. ಇದೀಗ ಹೊಸದಾಗಿ 12,817 ಕೇಂದ್ರಗಳನ್ನು ರಚಿಸಿದ್ದು, ಒಟ್ಟು 90,712 ಮತದಾನ ಕೇಂದ್ರಗಳಿವೆ ಎಂದು ಚುನಾವಣಾ ಆಯೋಗವು ಪ್ರಕಟಣೆಯಲ್ಲಿ ತಿಳಿಸಿದೆ.

ಹೊಸ ಮತದಾನ ಕೇಂದ್ರಗಳು ಈಗಿರುವ ಕೇಂದ್ರಗಳಲ್ಲಿ ಅಥವಾ ಅದರ ಆಸುಪಾಸಿನಲ್ಲಿರಲಿವೆ. ಜಿಲ್ಲಾವಾರು ಪಟ್ಟಿಯನ್ನು ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ.

ವರ್ಷದಾಂತ್ಯದಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಜರುಗುವ ಹಿನ್ನಲೆಯಲ್ಲಿ ಚುನಾವಣಾ ಆಯೋಗವು ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್)ಯನ್ನು ಜೂನ್ 25ರಂದು ರಚಿಸಿತ್ತು. ಅದರ ವರದಿಯಲ್ಲಿ ಒಂದು ಮತದಾನ ಕೇಂದ್ರದಲ್ಲಿ 1200ಕ್ಕೂ ಅಧಿಕ ಮತದಾರರು ಇರಬಾರದು ಎಂದು ಸೂಚಿಸಿತ್ತು.

ಜುಲೈ 25ರೊಳಗೆ ಬಿಹಾರದ ಮತದಾರರ ಪಟ್ಟಿಯನ್ನು ರಚಿಸಲು ಎಸ್ಐಆರ್ ರಚಿಸಲಾಗಿದ್ದು, ಶೇ 95.92ರಷ್ಟು ಪೂರ್ಣಗೊಂಡಿದೆ. 7.9 ಕೋಟಿ ಮತದಾರರಲ್ಲಿ ಮೃತಪಟ್ಟವರು ಹಾಗೂ ವಿಳಾಸವಿಲ್ಲದ 41.64 ಲಕ್ಷ ಮತದಾರರು ಪತ್ತೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.