ಪಟ್ನಾ: ಈ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಗೆಲುವು ಸಾಧಿಸಿದರೂ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಿಲ್ಲ ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ.
.Bihar Polls | ನಾನು ಸಿಎಂ ಆದ್ರೆ ಬಡತನ ಮುಕ್ತ ಬಿಹಾರ ನನ್ನ ಆದ್ಯತೆ: ತೇಜಸ್ವಿ.
ನಿತೀಶ್ ಕುಮಾರ್ ಅವರನ್ನು ಬಿಜೆಪಿ ಹೈಜಾಕ್ ಮಾಡಿದ್ದು, ಹಾಗೂ ಗುಜರಾತ್ನ ಇಬ್ಬರು ಬಿಹಾರವನ್ನು ನಿಯಂತ್ರಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಹೆಸರೆತ್ತದೆ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸರ್ಕಾರವು ರಾಜ್ಯದ ಭ್ರಷ್ಟ ನಾಯಕರು ಹಾಗೂ ಕ್ರಿಮಿನಲ್ಗಳನ್ನು ರಕ್ಷಿಸುತ್ತಿದೆ ಎಂದು ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯೂ ಆಗಿರುವ ತೇಜಸ್ವಿ ಆರೋಪಿಸಿದ್ದಾರೆ.
.Podcast| ಬಿಹಾರ: ಹೊಂದಾಣಿಕೆ ಕೊರತೆ ಪ್ರತಿಪಕ್ಷಗಳ ವಿಶ್ವಾಸಾರ್ಹತೆಗೆ ಧಕ್ಕೆ.
ಸಹರ್ಸಾ ಜಿಲ್ಲೆಯ ಸಿಮ್ರಿ ಭಕ್ತಯಾರ್ಪುರದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು,‘ಒಂದು ವೇಳೆ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದನ್ನು ಶಾಸಕರು ತೀರ್ಮಾನ ಮಾಡುತ್ತಾರೆ ಎಂದು ಅಮಿತ್ ಶಾ ಹೇಳಿದ್ದಾರೆ. ಅಧಿಕಾರಕ್ಕೆ ಬಂದರೂ ನಿತೀಶ್ ಕುಮಾರ್ ಅವರನ್ನು ಸಿಎಂ ಮಾಡುವುದಿಲ್ಲ’ ಎಂದು ತೇಜಸ್ವಿ ಹೇಳಿದ್ದಾರೆ.

ನಾವು ಅಧಿಕಾರಕ್ಕೆ ಬಂದರೆ ಸ್ವಚ್ಛ ಆಡಳಿತ ನೀಡುತ್ತೇವೆ ಎಂದು ಇದೇ ವೇಳೆ ಆಶ್ವಾಸನೆ ನೀಡಿದ್ದಾರೆ.
.ಬಿಹಾರ ಚುನಾವಣೆ| ನಿತೀಶ್ ಕುಮಾರ್ ನಾಯಕತ್ವದಲ್ಲಿ ಎನ್ಡಿಎ ದಾಖಲೆ ಬರೆಯಲಿದೆ: ಮೋದಿ.
‘ನನ್ನದು ಬಡ, ನಿರುದ್ಯೋಗ, ಭ್ರಷ್ಟಾಚಾರ ಹಾಗೂ ಕ್ರಿಮಿನಲ್ ಪ್ರಕರಣ ಹೆಚ್ಚಿರುವ ರಾಜ್ಯ ಎಂದು ಕೇಳುವಾಗ ಓರ್ವ ಬಿಹಾರಿಯಾಗಿ ನನಗೆ ಕೋಪ ಬರುತ್ತದೆ. ರಾಜ್ಯದಲ್ಲಿ 20 ವರ್ಷಗಳ ಹಾಗೂ ಕೇಂದ್ರದಲ್ಲಿ 11 ವರ್ಷಗಳ ಎನ್ಡಿಎ ಆಡಳಿತ ಇದ್ದರೂ ರಾಜ್ಯದ ಜನರ ತಲಾ ಆದಾಯ ಹಾಗೂ ರೈತರ ಆದಾಯ ಕಡಿಮೆ ಇದೆ’ ಎಂದು ಹೇಳಿದ್ದಾರೆ.

ಸಹರ್ಸಾದ ಮತದಾರರು ‘ಬಿಹಾರಿ’ ಮತ ಹಾಕಿ ‘ಬಾಹರಿ’ಗಲ್ಲ (ಹೊರಗಿನವರಿಗಲ್ಲ) ಎಂದು ಭಿನ್ನವಿಸಿಕೊಂಡರು.
.ಬಿಹಾರ ಚುನಾವಣೆ: 8 ಕ್ಷೇತ್ರಗಳಲ್ಲಿ ಪರಸ್ಪರ ಸ್ಪರ್ಧಿಸಲಿರುವ 'ಇಂಡಿಯಾ' ಮೈತ್ರಿಕೂಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.