ಸೋಮವಾರ, 3 ನವೆಂಬರ್ 2025
×
ADVERTISEMENT
ADVERTISEMENT

ಬಿಹಾರ ವಿಧಾನಸಭಾ ಚುನಾವಣೆ | ಕಾವೇರಿದ ಪ್ರಚಾರ: ಪ್ರಧಾನಿ ಮೋದಿ– ರಾಹುಲ್‌ ವಾಕ್ಸಮರ

Published : 2 ನವೆಂಬರ್ 2025, 14:16 IST
Last Updated : 2 ನವೆಂಬರ್ 2025, 14:16 IST
ಫಾಲೋ ಮಾಡಿ
Comments
‘ಆರ್‌ಜೆಡಿ ಬೆದರಿಕೆಗೆ ಮಣಿದ ಕಾಂಗ್ರೆಸ್’
‘ಬಿಜೆಪಿ, ಆರ್‌ಎಸ್‌ಎಸ್‌ನಿಂದ ಮತ ಕಳವು’
ಬಿಜೆಪಿ ಮತ್ತು ಜೆಡಿಯು ಕಳೆದ 20 ವರ್ಷಗಳಲ್ಲಿ ಬಿಹಾರದ ಯುವ ಜನರ ಪ್ರತಿಯೊಂದು ಅವಕಾಶವನ್ನೂ ಕಸಿದುಕೊಂಡಿದೆ. ಇದೀಗ ಬದಲಾವಣೆಯ ಕಾಲ ಕೂಡಿಬಂದಿದೆ
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ
ಲಾಲು ಅವರ ಮಗ (ತೇಜಸ್ವಿ) ಬಿಹಾರದ ಮುಖ್ಯಮಂತ್ರಿಯಾದರೆ ಅಪಹರಣ ಸುಲಿಗೆ ಮತ್ತು ಕೊಲೆ ಪ್ರಕರಣಗಳ ಮೇಲ್ವಿಚಾರಣೆ ಮಾಡಲು ಇನ್ನೂ ಮೂರು ಹೊಸ ಖಾತೆಗಳನ್ನು ರಚಿಸಲಾಗುತ್ತದೆ
ಅಮಿತ್‌ ಶಾ ಕೇಂದ್ರ ಗೃಹ ಸಚಿವ
‘ಸಿಂಧೂರ ಆಘಾತ: ಚೇತರಿಸದ ಕಾಂಗ್ರೆಸ್’
ನಮ್ಮ ಸೈನಿಕರು ಪಾಕಿಸ್ತಾನದಲ್ಲಿನ ಭಯೋತ್ಪಾದಕರ ಅಡಗುತಾಣಗಳ ಮೇಲೆ ಬಾಂಬ್ ದಾಳಿ ನಡೆಸಿದಾಗ ಕಾಂಗ್ರೆಸ್‌ನ ‘ರಾಜಮನೆತನದವರು’ ನಿದ್ದೆ ಕಳೆದುಕೊಳ್ಳುತ್ತಿದ್ದರು. ಪಾಕಿಸ್ತಾನ ಮತ್ತು ಕಾಂಗ್ರೆಸ್, ಆಪರೇಷನ್ ಸಿಂಧೂರದ ಆಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಭಯೋತ್ಪಾದಕರನ್ನು ಅವರ ತವರು ನೆಲದಲ್ಲಿಯೇ ಮಟ್ಟಹಾಕುವುದಾಗಿ ನಾವು ಪ್ರತಿಜ್ಞೆ ಮಾಡಿದ್ದೆವು. ಸಿಂಧೂರ ಕಾರ್ಯಾಚರಣೆ ಮೂಲಕ ಆ ಭರವಸೆಯನ್ನು ಈಡೇರಿಸಿದ್ದೇವೆ. ಇದು ರಾಷ್ಟ್ರಕ್ಕೆ ಹೆಮ್ಮೆ ತಂದಿದೆ. ಅವರು (ರಾಹುಲ್‌) ನುಸುಳುಕೋರರಿಗೆ ರಕ್ಷಣೆ ನೀಡಲಿಕ್ಕಾಗಿ ‘ಮತದಾರರ ಅಧಿಕಾರ ಯಾತ್ರೆ’ ನಡೆಸಿದ್ದಾರೆ. ಬಿಹಾರದ ಜನರ ಸಂಪನ್ಮೂಲ ನುಸುಳುಕೋರರ ಕೈಸೇರಬಾರದು.
–ನರೇಂದ್ರ ಮೋದಿ, ಪ್ರಧಾನಿ
‘ಪ್ರಧಾನಿಗೆ ಟ್ರಂಪ್, ಉದ್ಯಮಿಗಳ ಭಯ’
ವಿಶಾಲ ಎದೆ ಹೊಂದಿರುವುದು ನಿಮ್ಮನ್ನು ಧೈರ್ಯಶಾಲಿಯನ್ನಾಗಿ ಮಾಡುವುದಿಲ್ಲ. ಸಣಕಲು ಮೈಕಟ್ಟು ಹೊಂದಿದ್ದ ಮಹಾತ್ಮಾ ಗಾಂಧಿ ಅವರು ಆ ಕಾಲದ ದೈತ್ಯ ಶಕ್ತಿ ಎನಿಸಿದ್ದ ಬ್ರಿಟಿಷರನ್ನು ಯಾವ ರೀತಿ ಎದುರಿಸಿದ್ದರು ಎಂಬುದನ್ನು ನೋಡಿ. ‘ನನಗೆ 56 ಇಂಚಿನ ಎದೆ ಇದೆ. ನಾನು ಯಾರಿಗೂ ಹೆದರುವುದಿಲ್ಲ’ ಎಂದು ಹೇಳುವ ಮೋದಿ ಅವರು ಆಪರೇಷನ್ ಸಿಂಧೂರ ಸಮಯದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ಮಾಡಿದಾಗ ಹೆದರಿದರು. ಪಾಕ್‌ ವಿರುದ್ಧದ ಸೇನಾ ಸಂಘರ್ಷ ಎರಡನೇ ದಿನಗಳಲ್ಲಿ ಕೊನೆಗೊಂಡಿತು. ಅವರು (ಮೋದಿ) ಟ್ರಂಪ್‌ಗೆ ಹೆದರುತ್ತಾರೆ. ಅಷ್ಟೇ ಅಲ್ಲದೆ, ಅಂಬಾನಿ ಮತ್ತು ಅದಾನಿ ಅವರು ರಿಮೋಟ್-ಕಂಟ್ರೋಲ್ ಮೂಲಕ ಪ್ರಧಾನಿಯನ್ನು ನಿಯಂತ್ರಿಸುತ್ತಿದ್ದಾರೆ.
–ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT