ದರ್ಭಂಗಾ/ಪಟ್ನಾ(ಬಿಹಾರ): ರಂಜಾನ್ ಅಂಗವಾಗಿ ಮುಸ್ಲಿಮರು ಕೈಗೊಳ್ಳುವ ಪ್ರಾರ್ಥನೆಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಹೋಳಿ ಆಚರಣೆ ವೇಳೆ ಎರಡು ಗಂಟೆ ವಿರಾಮ ನೀಡಬೇಕು ಎಂದು ದರ್ಭಂಗಾ ಮೇಯರ್ ಅಂಜುಮ್ ಆರಾ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
.ಹೋಳಿ | ಅಯೋಧ್ಯೆಯಲ್ಲಿ ಮಧ್ಯಾಹ್ನ 2 ಗಂಟೆ ಬಳಿಕ ಜುಮಾ ನಮಾಜ್ : ಮುಸ್ಲಿಂ ಧರ್ಮಗುರು.
ಇತ್ತೀಚೆಗೆ ನಡೆದ ಶಾಂತಿ ಸಭೆಯಲ್ಲಿ ಅಂಜುಮ್ ಆರಾ ಈ ಪ್ರಸ್ತಾವ ಮುಂದಿಟ್ಟಿದ್ದರು.

ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ್ದ ಅವರು ‘ಶುಕ್ರವಾರ ಮಾಡುವ ನಮಾಜ್ನ ಸಮಯವನ್ನು ಮುಂದೂಡಲಾಗದು. ಹೀಗಾಗಿ ಮಧ್ಯಾಹ್ನ 12ರಿಂದ 2 ರ ವರೆಗೆ ಮಸೀದಿ ಸಮೀಪದ ಪ್ರದೇಶಗಳಲ್ಲಿ ಹೋಳಿ ಆಚರಣೆಗೆ ಹಿಂದೂಗಳು ವಿರಾಮ ನೀಡಬೇಕು ಎಂಬುದಾಗಿ ನಾನು ಮನವಿ ಮಾಡಿದ್ದೆ’ ಎಂದು ಹೇಳಿದ್ದರು.

ಇದಕ್ಕೆ ಮಧುಬನಿ ಕ್ಷೇತ್ರದ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ‘ಹೋಳಿ ಆಚರಣೆಯಿಂದ ಸಮಸ್ಯೆ ಆಗುತ್ತದೆ ಎನ್ನುವವರು ಮನೆಯೊಳಗೆ ಇರಲಿ’ ಎಂದು ಮುಸ್ಲಿಮರನ್ನು ಉದ್ಧೇಶಿಸಿ ಠಾಕೂರ್ ಇತ್ತೀಚೆಗೆ ಹೇಳಿದ್ದರು.
.ಹೋಳಿ ಮೆರವಣಿಗೆ: ಉ.ಪ್ರದ ಶಹಜಹಾನ್ಪುರದ 20 ಮಸೀದಿಗಳಿಗೆ ಟಾರ್ಪಾಲಿನ್ ಹೊದಿಕೆ.
‘ನನ್ನ ಹೇಳಿಕೆ ವಿಚಾರವಾಗಿ ನನ್ನ ವಿರುದ್ಧ ವಾಗ್ದಾಳಿ ನಡೆಸಿದ್ದ ಸ್ವಯಂ ಘೋಷಿತ ಜಾತ್ಯತೀತವಾದಿಗಳು ಈಗ ಎಲ್ಲಿದ್ದಾರೆ? ದರ್ಭಂಗಾ ಮೇಯರ್ ಅಕ್ಷರಶಃ ಗಜ್ವಾ–ಎ–ಹಿಂದ್ಗೆ ಕರೆ ಕೊಟ್ಟಿದ್ದಾರೆ’ ಎಂದು ಠಾಕೂರ್ ಪ್ರತಿಕ್ರಿಯಿಸಿದ್ದಾರೆ.
.ಹೋಳಿ ವೇಳೆ ಮುಸ್ಲಿಮರು ಮನೆಯಲ್ಲಿರಲಿ: ಬಿಹಾರದ ಬಿಜೆಪಿ ಶಾಸಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.