ಲಖನೌ: ಉತ್ತರಪ್ರದೇಶದ ವಿಧಾನಸಭೆಯ ಉಪಚುನಾವಣೆಗೂ ಮುನ್ನ ಬಿಜೆಪಿಗೆ ಸಂಕಷ್ಟ ಎದುರಾಗಿದ್ದು, 10ರಲ್ಲಿ 5 ಸ್ಥಾನಗಳನ್ನು ಮಿತ್ರ ಪಕ್ಷಗಳಿಗೆ ಬಿಟ್ಟುಕೊಡಬೇಕಾದ ಅನಿವಾರ್ಯತೆ ಎದುರಾಗಿದೆ.
10ರಲ್ಲಿ 8 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಬಿಜೆಪಿ ಈ ಹಿಂದೆ ತಿಳಿಸಿತ್ತು. ಆದರೆ ಮೈತ್ರಿಕೂಟದಲ್ಲಿನ ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ), ನಿಶಾದ್ ಪಾರ್ಟಿ(ಎನ್‌ಪಿ) ಮತ್ತು ಅಪ್ನಾ ದಳ(ಎಡಿ) ಐದು ಸ್ಥಾನಗಳನ್ನು ತಮಗೆ ನೀಡುವಂತೆ ಒತ್ತಾಯಿಸಿವೆ.
ಸೀಟು ಹಂಚಿಕೆ ವಿಚಾರದಲ್ಲಿ ಯಾವುದೇ ನಿರ್ಧಾರವಾಗಿಲ್ಲ ಎಂದು ಬಿಜೆಪಿ ತಿಳಿಸಿದೆ. ಆದರೆ, ಮಜವಾ ಮತ್ತು ಕಟೆಹರಿ ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ನಿಶಾದ್ ಪಕ್ಷ ಘೋಷಿಸಿದೆ.
ಆರ್‌ಎಲ್‌ಡಿ ಎರಡು ಸ್ಥಾನ ಮತ್ತು ಅಪ್ನಾ ದಳ ಒಂದು ಸ್ಥಾನಕ್ಕೆ ಬೇಡಿಕೆ ಇಟ್ಟಿದೆ.
‘ಮಿತ್ರ ಪಕ್ಷಗಳಿಗೆ 5 ಸ್ಥಾನಗಳನ್ನು ಬಿಟ್ಟುಕೊಡಲು ಬಿಜೆಪಿಗೆ ಮನಸ್ಸಿಲ್ಲ. ಈಗಾಗಲೇ 8 ಕ್ಷೇತ್ರಗಳಿಗೆ ಚುನಾವಣಾ ಉಸ್ತುವಾರಿಗಳಾಗಿ ಸಚಿವರನ್ನು ನೇಮಕಗೊಳಿಸಿದೆ’ ಎಂದು ಮೂಲಗಳು ತಿಳಿಸಿವೆ.