ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ ರಾಜ್ಯವನ್ನು ಒಳ ನುಸುಳುಕೋರರ ಕೇಂದ್ರವಾಗಿಸಲು ಬಿಡುವುದಿಲ್ಲ: ಅಮಿತ್ ಶಾ

Last Updated 31 ಮಾರ್ಚ್ 2021, 11:07 IST
ಅಕ್ಷರ ಗಾತ್ರ

ಗುವಾಹಟಿ: ಅಸ್ಸಾಂ ಅನ್ನು ಒಳ ನುಸುಳುಕೋರರ ಕೇಂದ್ರವಾಗಿಸಲು ಬಿಜೆಪಿಯು ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬುಧವಾರ ಹೇಳಿದ್ದಾರೆ.

ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆ ರ‍್ಯಾಲಿ ಉದ್ದೇಶಿಸಿ ಮಾತನಾಡಿರುವ ಅವರು ಕಾಂಗ್ರೆಸ್‌ ಹಾಗೂ ಎಐಯುಡಿಎಫ್‌ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

'ಅಸ್ಸಾಂಮೀಸ್ ಮತ್ತು ಬಂಗಾಳಿಗಳ ನಡುವೆ, ಹಿಂದೂಗಳು ಮತ್ತು ಮುಸ್ಲಿಮರ ನಡುವೆ, ಕಣಿವೆ ಅಸ್ಸಾಂ ಮತ್ತು ಕೆಳಸ್ತರದ ಅಸ್ಸಾಂನ ಜನರ ನಡುವೆ ಕಾಂಗ್ರೆಸ್‌ ಪಕ್ಷವು ಬಿರುಕು ಸೃಷ್ಟಿಸಿದೆ . ನರೇಂದ್ರ ಮೋದಿ ಅವರು ಎಲ್ಲರ ವಿಕಾಸವನ್ನು ಬಯಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅಸ್ಸಾಂನಲ್ಲಿ ಶಾಂತಿ ಮತ್ತು ಅಭಿವೃದ್ಧಿಯನ್ನು ಬಿಜೆಪಿ ಖಾತ್ರಿಪಡಿಸಿದೆ' ಎಂದು ಶಾ ಹೇಳಿದ್ದಾರೆ.

ಇದೇ ವೇಳೆ ಎಐಯುಡಿಎಫ್‌ ಪಕ್ಷದ ಅಧ್ಯಕ್ಷ ಬದ್ರೂದ್ದೀನ್ ಅಜ್ಮಲ್‌ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಅಮಿತ್‌ ಶಾ, 'ಅಸ್ಸಾಂನ ಅಧಿಕಾರ ಯಾರ ಬಳಿ ಇರಬೇಕು ಎಂಬುದನ್ನು ನಮ್ಮ ಪಕ್ಷ ತೀರ್ಮಾನಿಸಲಿದೆ ಎಂದು ಅಜ್ಮಲ್‌ ಹೇಳಿದ್ದಾರೆ. ಆದರೆ, ಅಧಿಕಾರವನ್ನು ಯಾರ ಕೈಗಳಿಗೆ ನೀಡಬೇಕೆಂದು ಇಲ್ಲಿನ ಜನರು ನಿರ್ಧರಿಸಲಿದ್ದಾರೆ. ಅಸ್ಸಾಂ ರಾಜ್ಯವನ್ನು ಒಳ ನುಸುಳುಕೋರರ ಕೇಂದ್ರವಾಗಿಸಲು ಬಿಜೆಪಿಯು ಅವಕಾಶ ನೀಡುವುದಿಲ್ಲ' ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT