ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹2 ಕೋಟಿ ಪ್ರತಿಫಲ ಕೋರಿ ಬೊಮ್ಮ–ಬೆಳ್ಳಿ ಮಾವುತ ದಂಪತಿಯಿಂದ ನೋಟಿಸ್‌

Published 7 ಆಗಸ್ಟ್ 2023, 3:36 IST
Last Updated 7 ಆಗಸ್ಟ್ 2023, 3:36 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ಕರ್ ಪ್ರಶಸ್ತಿ ವಿಜೇತ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರದ ನಿರ್ಮಾಪಕಿ ಕಾರ್ತಿಕಿ ಗೊನ್ಸಾಲ್ವೆಸ್ ಅವರು ತಮಗೆ  ₹2 ಕೋಟಿ ನೀಡುವಂತೆ ಬೊಮ್ಮ–ಬೆಳ್ಳಿ ಮಾವುತ ದಂಪತಿಯು ಲೀಗಲ್ ನೋಟಿಸ್‌ ನೀಡಿದ್ದಾರೆ.

ಗೊನ್ಸಾಲ್ವೆಸ್ ಅವರಿಗೆ ನೀಡಿರುವ ಲೀಗಲ್‌ ನೋಟಿಸ್‌ ಪ್ರತಿ ‘ಪಿಟಿಐ’ ಸುದ್ದಿ ಸಂಸ್ಥೆಗೆ ಲಭಿಸಿದೆ. 

‘ಈ ಪ್ರಾಜೆಕ್ಟ್‌ನಲ್ಲಿ ಬರುವ ಆದಾಯದಲ್ಲಿ ದಂಪತಿಗೆ ಸೂಕ್ತ ಮನೆ ಮತ್ತು ಬಹುಪಯೋಗಿ ವಾಹನ, ಹಣಕಾಸಿನ ನೆರವು (ನಿರ್ದಿಷ್ಟ ಮೊತ್ತ ಉಲ್ಲೇಖಿಸಿರಲಿಲ್ಲ) ಕೊಡುವ ಭರವಸೆ ನೀಡಲಾಗಿತ್ತು. ಆದರೆ, ಯಾವುದನ್ನೂ ನೀಡಿಲ್ಲ. ಒಂದು ಕಡೆ, ಈ ದಂಪತಿಯನ್ನು ಗಣ್ಯರು, ರಾಜಕೀಯ ನಾಯಕರಿಗೆ ‘ನೈಜ ಹೀರೊಗಳು’ ಎಂದು ಪರಿಚಯಿಸಿ, ಪ್ರಚಾರ ಪಡೆಯಲಾಯಿತು. ಮತ್ತೊಂದೆಡೆ, ಚಿತ್ರ ನಿರ್ಮಾಪಕರು ತಮಿಳುನಾಡು ಮುಖ್ಯಮಂತ್ರಿ ಮತ್ತು ಪ್ರಧಾನಿಯಿಂದ ಪ್ರಯೋಜನಗಳನ್ನು ಪಡೆದರು ಎಂದು ಉಲ್ಲೇಖಿಸಲಾಗಿದೆ’.

ಸುದ್ದಿ ಸಂಸ್ಥೆ ಪ್ರತಿನಿಧಿ ಪ್ರತಿಕ್ರಿಯೆಗಾಗಿ ಸಂಪರ್ಕಿಸಿದಾಗ ಬೊಮ್ಮನ್ ಅವರು, ‘ಪ್ರಕರಣದ ಬಗ್ಗೆ ಇನ್ನು ಮುಂದೆ ಮಾತನಾಡದಂತೆ, ಹೆಚ್ಚಿನ ಮಾಹಿತಿಗೆ ತಮ್ಮ ವಕೀಲರನ್ನು ಸಂಪರ್ಕಿಸಲು ನಮಗೆ ಸಲಹೆ ನೀಡಲಾಗಿದೆ’ ಎಂದು ಹೇಳಿದರು.

ಮಾವುತ ದಂಪತಿಯನ್ನು ಒಂದು ದಶಕದಿಂದ ಬಲ್ಲವರಾದ, ವೃತ್ತಿಯಲ್ಲಿ ವಕೀಲರಾಗಿರುವ ಚೆನ್ನೈ ಮೂಲದ ಸಾಮಾಜಿಕ ಕಾರ್ಯಕರ್ತ ಪ್ರವೀಣ್ ರಾಜ್ ಅವರು ‘ಬೊಮ್ಮನ್ ಮತ್ತು ಬೆಳ್ಳಿ ಇಬ್ಬರೂ ಗೊನ್ಸಾಲ್ವಿಸ್ ಬಗ್ಗೆ ನಿರಾಶರಾಗಿದ್ದಾರೆ. ಅವರು ಚಲನಚಿತ್ರವನ್ನು ನಿರ್ಮಿಸುವಾಗ ಹಣಕಾಸಿನ ಸಹಾಯದ ಜತೆಗೆ, ಬೆಳ್ಳಿ ಅವರ ಮೊಮ್ಮಗಳ ಶಿಕ್ಷಣಕ್ಕೆ ನೆರವಾಗುವ ಭರವಸೆ ನೀಡಿದ್ದರು. ಆದರೆ, ಅವರು ಚಿತ್ರದಿಂದ ಗಳಿಸಿದ ಅಗಾಧ ಲಾಭದ ಒಂದು ಭಾಗವನ್ನು ಈ ದಂಪತಿಗೆ ನೀಡಲು ಈಗ ನಿರಾಕರಿಸಿದ್ದಾರೆ’ ಎಂದು ಹೇಳಿದರು.

ಪ್ರಕರಣ ನಿರ್ವಹಿಸುತ್ತಿರುವ ವಕೀಲ ಮೊಹಮ್ಮದ್ ಮನ್ಸೂರ್ ಅವರು ನಾಲ್ಕು ದಿನಗಳ ಹಿಂದೆ ಗೊನ್ಸಾಲ್ವಿಸ್ ಪರವಾಗಿ ಸಿಖ್ಯ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನಿಂದ ಗೋನ್ಸಾಲ್ವಿಸ್ ಪರವಾಗಿ ನೋಟಿಸ್‌ಗೆ ಉತ್ತರ ಬಂದಿದೆ. ಅದರಲ್ಲಿ ‘ಈಗಾಗಲೇ ದಂಪತಿಗೆ ಹಣ ನೀಡಲಾಗಿದೆ ಎಂದು ಉತ್ತರಿಸುವ ಮೂಲಕ, ಮತ್ತೆ ಯಾವುದೇ ಸಹಾಯ ನೀಡಲು ನಿರಾಕರಿಸಿದ್ದಾರೆ. ನನ್ನ ಕಕ್ಷಿದಾರರ ಜತೆ ಸಮಾಲೋಚನೆ ನಡೆಸಿದ ನಂತರ ಇದಕ್ಕೆ ತಕ್ಕ ಪ್ರತ್ಯುತ್ತರ ಕಳುಹಿಸಲಾಗುವುದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT