ಬೆಂಗಳೂರು: ಉದ್ಯಾನನಗರಿಯ ಕ್ರಿಕೆಟ್ ಹಿಂದೆಂದೂ ಇಂತಹ ಬಿಕ್ಕಟ್ಟನ್ನು ಎದುರಿಸಿರಲಿಲ್ಲ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ಟ್ರೋಫಿ ಗೆಲುವಿನ ಸಂಭ್ರಮಾಚರಣೆಯ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ್ದ ಕಾಲ್ತುಳಿತದ ಘಟನೆಯು ರಾಜ್ಯದ ಕ್ರಿಕೆಟ್ ಚಟುವಟಿಕೆಗಳ ಮೇಲೆ ಕರಿನೆರಳಂತೆ ಆವರಿಸಿದೆ. ಆ ದುರ್ಘಟನೆಯಲ್ಲಿ 11 ಜನ ಬಲಿಯಾಗಿದ್ದರು. ಹಲವರು ಗಾಯಗೊಂಡಿದ್ದರು. ಆ ಘಟನೆಯ ನಂತರ ಚಿನ್ನಸ್ವಾಮಿ ಕ್ರೀಡಾಂಗಣವು ಆರೋಪ –ಪ್ರತ್ಯಾರೋಪಗಳ ಆಟಕ್ಕೆ ವೇದಿಕೆಯಾಗಿದೆ. ಒಬ್ಬರಿನ್ನೊಬ್ಬರತ್ತ ಬೆರಳು ತೋರಿಸುವುದರಲ್ಲಿ ನಿರತರಾಗಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ಆರ್ಸಿಬಿಯು ಕ್ರಮವಾಗಿ ವಿಜಯೋತ್ಸವ ಕಾರ್ಯಕ್ರಮದ ಆತಿಥೇಯರು ಮತ್ತು ಆಯೋಜಕರು. ಆದ್ದರಿಂದ ಅವರೀಗ ಇಕ್ಕಟ್ಟಿಗೆ ಸಿಲುಕಿರುವುದು ಅರ್ಥವಾಗುತ್ತದೆ. ರಾಜ್ಯ ಸರ್ಕಾರ ಮಾತ್ರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿರುವುದೂ ಗುಟ್ಟೇನಲ್ಲ.

ಈ ಸಂಭ್ರಮಾಚರಣೆಯ ಆಯೋಜನೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಕೂಡ ಪ್ರಮುಖ ಪಾತ್ರವಹಿಸಿದ್ದರು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅಲ್ಲದೇ ವಿಮಾನನಿಲ್ದಾಣದಲ್ಲಿ ತಂಡವನ್ನು ಸ್ವಾಗತಿಸಿದ್ದ ಉಪಮುಖ್ಯಮಂತ್ರಿ; ಕ್ರೀಡಾಂಗಣದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿಯೂ ಮುಂಚೂಣಿಯಲ್ಲಿದ್ದರು. ಆದರೆ ದುರ್ಘಟನೆಯ ಹೊಣೆಗಾರಿಕೆಯಿಂದ ಸರ್ಕಾರವು ಅಂತರ ಕಾಯ್ದುಕೊಳ್ಳುತ್ತಿರುವುದು ವಿಚಿತ್ರ.

ಸರ್ಕಾರ ನೇಮಕ ಮಾಡಿದ ನ್ಯಾಯಾಧೀಶ ಮೈಕೆಲ್ ಡಿಕುನ್ಹಾ ಆಯೋಗವು ದುರ್ಘಟನೆಯ ಕುರಿತು ಕೂಲಂಕಷ ತನಿಖೆ ನಡೆಸಿ ವರದಿ ಕೊಟ್ಟಿದೆ. ಅದರಲ್ಲಿ ‘ಕ್ರೀಡಾಂಗಣವು ದೊಡ್ಡಮಟ್ಟದಲ್ಲಿ ಜನ ಸೇರುವ ಕಾರ್ಯಕ್ರಮಗಳಿಗೆ ಯೋಗ್ಯವಾಗಿಲ್ಲ’ ಎಂದು ಉಲ್ಲೇಖಿಸಿದ್ದು, ಮೂಲಸೌಲಭ್ಯ ಮತ್ತು ವಿನ್ಯಾಸದ ನವೀಕರಣಕ್ಕಾಗಿ ಶಿಫಾರಸು ಮಾಡಿದೆ.

‘ಶಿಫಾರಸು ಮಾಡಿರುವ ಸುಧಾರಣೆ ಕ್ರಮಗಳನ್ನು ಕೈಗೊಳ್ಳದೇ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಕಾರ್ಯಕ್ರಮಗಳನ್ನು ಅಯೋಜಿಸುವುದು ಆತಂಕಕಾರಿ. ಜನರ ಸುರಕ್ಷತೆ, ನಗರ ಸಂಚಾರ ವ್ಯವಸ್ಥೆ ಮತ್ತು ತುರ್ತು ಘಟನೆಗಳ ನಿರ್ವಹಣೆಗೆ ಅಡ್ಡಿಯಾಗುವ ಸಾಧ್ಯತೆಗಳು ಹೆಚ್ಚು’ ಎಂದೂ ಆಯೋಗ ಹೇಳಿದೆ.

ಇದೀಗ ಕೆಎಸ್ಸಿಎಯನ್ನು ತನ್ನ ಆಣತಿಗೆ ತಕ್ಕಂತೆ ಆಡಿಸಲು ಸರ್ಕಾರಕ್ಕೆ ಈ ವರದಿಯನ್ನು ಕೋಲಿನಂತೆ ಬಳಸುತ್ತಿದೆ. ಅದಕ್ಕಾಗಿಯೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಹಾರಾಜ ಟ್ರೋಫಿ ಟಿ20 ಟೂರ್ನಿಯನ್ನು ಆಯೋಜಿಸಲು ಅನುಮತಿ ನೀಡಲಿಲ್ಲ. ಟೂರ್ನಿಯನ್ನು ಮೈಸೂರಿಗೆ ಸ್ಥಳಾಂತರಿಸಲಾಯಿತು. ಅಲ್ಲಿಯೂ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

ಇದೇ ತಿಂಗಳು ಆರಂಭವಾಗಲಿರುವ ಐಸಿಸಿ ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಕೆಲವು ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ ಅವುಗಳ ಆಯೋಜನೆಗೆ ಷರತ್ತುಗಳನ್ನು ನಗರ ಪೊಲೀಸ್ ಇಲಾಖೆ ಹಾಕಿತು. ಇದರಿಂದಾಗಿ ಪಂದ್ಯಗಳನ್ನು ನವೀ ಮುಂಬೈಗೆ ಸ್ಥಳಾಂತರಿಸಲಾಯಿತು. ಉದಾಹರಣೆಗೆ; ಕ್ರೀಡಾಂಗಣದಲ್ಲಿ ವಾಹನ ನಿಲುಗಡೆಗಾಗಿ ಪ್ರತ್ಯೇಕ ಸ್ಥಳವನ್ನು ನೀಡಬೇಕು ಎಂಬುದೂ ಒಂದು ಷರತ್ತು. ಇದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಜಗತ್ತಿನಲ್ಲಿ ಯಾವುದೇ ಕ್ರಿಕೆಟ್ ಮೈದಾನದಲ್ಲಿಯೂ ಇಂತಹ ಸೌಲಭ್ಯ ಇಲ್ಲ. ಪರೋಕ್ಷವಾಗಿ ನಿಷೇಧ ಹೇರುವ ಕ್ರಮ ಇದಾಗಿದೆಯೇ?

ಆದಾಗ್ಯೂ, ಜೂನ್ 4ರ ಘಟನೆಯು ಕ್ರಿಕೆಟ್ ಪಂದ್ಯದಲ್ಲಿ ಆಗಿರಲಿಲ್ಲ ಎಂಬುದನ್ನು ಮರೆಯಬಾರದು. ಉಚಿತ ಪ್ರವೇಶ ಅಥವಾ ಉಚಿತ ಪಾಸ್ ವಿತರಿಸಲಾಗುವುದು ಎಂದು ಭಾವಿಸಿದ್ದ ಸುಮಾರು ಮೂರು ಲಕ್ಷ ಜನರು ಅಲ್ಲಿಗೆ ಬಂದಿಳಿದಿದ್ದರು. ಇಷ್ಟು ದೊಡ್ಡ ಜನಸಂಖ್ಯೆಗೆ ಪೊಲೀಸ್ ವ್ಯವಸ್ಥೆ ಅಸಮರ್ಪಕವಾಗಿತ್ತು.

50 ವರ್ಷಗಳ ಇತಿಹಾಸವಿರುವ ಈ ಕ್ರೀಡಾಂಗಣದಲ್ಲಿ ಹಲವಾರು ಮಹತ್ವದ ಪಂದ್ಯಗಳು ನಡೆದಿವೆ. ಟಿಕೆಟ್ ಮಾರಾಟದ ಸಂದರ್ಭಗಳಲ್ಲಿ ಕೆಲ ಸಣ್ಣಪುಟ್ಟ ಘಟನೆಗಳನ್ನು ಬಿಟ್ಟರೆ ದೊಡ್ಡ ದುರಂತಗಳು ಆಗಿರಲಿಲ್ಲ. ಜೂನ್ 4 ಅಂತಹದೊಂದು ದುರಂತದ ದಿನವಾಗಲು ಕಾದಿತ್ತೇನೋ?

ಹೆಚ್ಚೆಂದರೆ ನೂರು ಜನ ಸೇರುವ ದೇಶಿ ಕ್ರಿಕೆಟ್ ಪಂದ್ಯಗಳು, ಟಿಕೆಟ್ ಮೂಲಕ ಜನರಿಗೆ ಪ್ರವೇಶ ನೀಡಲಾಗುವ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮಿತಿಮೀರಿದ ದಟ್ಟಣೆಗೆ ಅವಕಾಶವಿರುವುದಿಲ್ಲ. ಅದರಲ್ಲೂ ಜೂನ್ 4ರಂದು ಸೇರಿದಷ್ಟು ಜನದಟ್ಟಣೆಯಂತೂ ಸಾಧ್ಯವೇ ಇಲ್ಲ. ಅದರ ಹಿಂದಿನ ಆರ್ಸಿಬಿ ಫೈನಲ್ ಗೆದ್ದ ನಂತರ ರಾತ್ರಿಯಿಡೀ ನಗರದಲ್ಲಿ ಜನರು ಬೀದಿಗಿಳಿದು ಸಂಭ್ರಮಿಸಿದ್ದರು. ಪೊಲೀಸರು ಬೆಳಗಿನ ಜಾವದವರೆಗೂ ಬಂದೋಬಸ್ತ್ ಮಾಡಿದ್ದರು. ಅದಾಗಿ ಕೆಲವೇ ಗಂಟೆಗಳಲ್ಲಿ ವಿಜಯೋತ್ಸವ ನಡೆಯಿತು. ದುರಂತ ಸಂಭವಿಸಿತು.

1974ರಲ್ಲಿ ಈ ಕ್ರೀಡಾಂಗಣ ನಿರ್ಮಾಣವಾಗಿದೆ. ಇಷ್ಟು ವರ್ಷಗಳಲ್ಲಿ ನಗರವೂ ಆಗಾಧವಾಗಿ ಬೆಳೆದಿದೆ. ಕ್ರೀಡಾಂಗಣದಲ್ಲಿರುವ ಸೌಲಭ್ಯಗಳೂ ಪ್ರಸ್ತುತ ಕಾಲಕ್ಕೆ ಹೊಂದಾಣಿಕೆಯಾಗಲಿಕ್ಕಿಲ್ಲ. ಆದರೆ ಕ್ರಿಕೆಟ್ ಪಂದ್ಯಗಳನ್ನು ನಿಷೇಧಿಸುವುದು ಇದಕ್ಕೆ ಪರಿಹಾರವಲ್ಲ. ರಸ್ತೆ ಗುಂಡಿಗಳಿಂದಾಗಿ ಸಂಭವಿಸುವ ಅಪಘಾತಗಳಿಂದಾಗಿ ಪ್ರತಿದಿನವೂ ಹಲವು ಜನ ಸಾಯುತ್ತಾರೆ. ಹಾಗೆಂದು ರಸ್ತೆಗಳನ್ನೇ ನಿರ್ಬಂಧಿಸಲು ಸಾಧ್ಯವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.