ಜಮ್ಮು: ಜಮ್ಮುವಿನ ಆರ್.ಎಸ್ ಪುರ ವಲಯದ ಅಂತರರಾಷ್ಟ್ರೀಯ ಗಡಿಯಲ್ಲಿ ಓರ್ವ ನುಸುಳುಕೋರನನ್ನು ಕೊಲ್ಲಲಾಗಿದೆ ಎಂದು ಗಡಿ ಭದ್ರತಾ ಪಡೆ ತಿಳಿಸಿದೆ.
.ಜಮ್ಮು ಮತ್ತು ಕಾಶ್ಮೀರ: ಕದನ ವಿರಾಮ ಒಪ್ಪಂದ ಉಲ್ಲಂಘಿಸಿದ ಪಾಕ್.
ಏಪ್ರಿಲ್ 4ರ ಮಧ್ಯರಾತ್ರಿ ಜಮ್ಮು ವಲಯದಲ್ಲಿ ವ್ಯಕ್ತಿಯೊಬ್ಬನ ಅನುಮಾನಾಸ್ಪದ ಚಲವಲನ ಭದ್ರತಾ ಪಡೆಗಳ ಕಣ್ಣಿಗೆ ಬಿದ್ದಿದೆ. ಆತ ಅಂತರರಾಷ್ಟ್ರೀಯ ಗಡಿ ದಾಟುತ್ತಿರುವುದನ್ನು ಕಂಡು ಎಚ್ಚರಿಕೆ ನೀಡಿವೆ.

ಎಚ್ಚರಿಕೆಯನ್ನು ಲೆಕ್ಕಿಸದೇ ಮುಂದುವರಿದಾಗ, ಅಪಾಯವನ್ನು ಗ್ರಹಿಸಿದ ಬಿಎಸ್ಎಫ್ ಆತನನ್ನು ಹೊಡೆದುರುಳಿಸಿದೆ.
.ಜಮ್ಮು– ಕಾಶ್ಮೀರದಲ್ಲಿ ಉಗ್ರರ ಚಲನವಲನ: ಕಾರ್ಯಾಚರಣೆ ಚುರುಕು.
ಆತನ ಗುರುತು ಹಾಗೂ ಉದ್ದೇಶ ಏನೆಂಬುದರ ಬಗ್ಗೆ ತನಿಖೆ ನಡೆಲಾಗುವುದು ಎಂದು ಬಿಎಸ್ಎಫ್ನ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾಗಿ ಎಎನ್ಐ ವರದಿ ಮಾಡಿದೆ. ಆತನ ಶವವನ್ನು ಮರಣೋತ್ತತ ಪರೀಕ್ಷೆಗೆ ಕಳುಹಿಸಲಾಗಿದೆ.

ಇದಾದ ಬಳಿಕ ಸ್ಥಳದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
.ಜಮ್ಮು | ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ; ಐವರು ಯೋಧರಿಗೆ ಗಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.