ನವದೆಹಲಿ: ಬಜೆಟ್ಗೂ ಮುನ್ನ ದೇಶದ ಆರ್ಥಿಕ ಪರಿಸ್ಥಿತಿಯನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ದೇಶದಲ್ಲಿ ನಿರುದ್ಯೋಗ, ಹಣದುಬ್ಬರ ಹೆಚ್ಚಳ, ಹೆಚ್ಚಳವಾಗದ ವೇತನ ಹಾಗೂ ಭಾರಿ ಆರ್ಥಿಕ ಅಸಮಾನತೆ ಇದೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ.
.Budget 2025: ಸತತ 8ನೇ ಸಲ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್.
ದೇಶದ ಆರ್ಥಿಕ ಬೆಳವಣಿಗೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ 2ರಷ್ಟು ಕುಂಠಿತವಾಗಲಿದೆ ಎಂದು ಮಾಜಿ ವಿತ್ತ ಸಚಿವರೂ ಆಗಿದ್ದ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಹೇಳಿದ್ದಾರೆ.

ದೆಹಲಿಯ 24, ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಂಸದ ರಾಜೀವ್ ಗೌಡ ನೇತೃತ್ವದ ತಂಡ ರಚಿಸಿರುವ ‘ಆರ್ಥಿಕತೆಯ ವಾಸ್ತವ ಸ್ಥಿತಿ–2025’ ವರದಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದ್ದಾರೆ.
.Budget 2025 | ಸ್ವಾತಂತ್ರ್ಯಾ ನಂತರ ಮಂಡನೆಯಾದ ಬಜೆಟ್ಗಳ ವಿಶೇಷತೆಗಳಿವು.
‘ಆರ್ಥಿಕತೆ ಮಂದಗತಿಯಲ್ಲಿದೆ ಎನ್ನುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಈ ಕಾರಣಕ್ಕೆ ಸರ್ಕಾರ ಹೆಚ್ಚಿನ ಪ್ರಯತ್ನವನ್ನು ಮಾಡಬಹುದು. ಜನರಿಗೆ ಉದ್ಯೋಗ ಇಲ್ಲ. ನಿರುದ್ಯೋಗ ಪ್ರಮಾಣಶ ಶೇ 40ರ ಸನಿಹವಿದೆ. ಪ್ರಧಾನಿ ನರೇಂದ್ರ ಮೋದಿ ಆಗಾಗ್ಗೆ ಉದ್ಯೋಗ ಪತ್ರ ನೀಡಿದರೂ ಜನರು ನಿರುದ್ಯೋಗಿಗಳಾಗಿದ್ದಾರೆ. ಖಾಲಿ ಇರುವ ಹುದ್ದೆಯನ್ನು ತುಂಬಿಸುವುದು ಹೊಸ ಉದ್ಯೋಗ ಸೃಜಿಸಿದಂತಲ್ಲ. ನಾಲ್ಕೈದು ವರ್ಷಗಳಿಂದ ವೇತನ ಹೆಚ್ಚಳವಾಗಿಲ್ಲ’ ಎಂದು ಅವರು ಹೇಳಿದ್ದಾರೆ.

‘ಹಣದುಬ್ಬರ ಹೆಚ್ಚಳವಾಗಿದೆ. ಆಹಾರ, ಶಿಕ್ಷಣ ಹಾಗೂ ಆರೋಗ್ಯ ಹಣದುಬ್ಬರ ಎರಡಂಕಿ ದಾಟಿದೆ. 2–3 ವರ್ಷದಿಂದ ಹಣದುಬ್ಬರ ಹೆಚ್ಚಳವಾಗುತ್ತಲೇ ಇದೆ’ ಎಂದು ಅವರು ಬೊಟ್ಟು ಮಾಡಿದ್ದಾರೆ.

ಆದಾಯ ಅಸಮಾನತೆ ಭಾರಿ ಪ್ರಮಾಣದಲ್ಲಿ ಇದೆ. ಶೇ 30ರಷ್ಟು ಜನರ ಆದಾಯ ಉತ್ತಮವಾಗಿರಬಹುದು. ಆದರೆ ಶೇ 70ರಷ್ಟು ಮಂದಿಯ ದಿನಗೂಲಿ ₹100–150 ಅಷ್ಟೇ ಇದೆ. ಬಡವರ ಹಾಗೂ ಶ್ರೀಮಂತರ ನಡುವಿನ ಅಂತರ ದೊಡ್ಡದಾಗುತ್ತಲೇ ಇದೆ. ಸರ್ಕಾರ ಈ ಬಗ್ಗೆ ಕ್ರಮವೇ ತೆಗೆದುಕೊಂಡಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
.Budget 2025: ಮಧ್ಯಮ ವರ್ಗದವರ ನಿರೀಕ್ಷೆಯಲ್ಲಿರುವ ಪ್ರಮುಖ 10 ಬೇಡಿಕೆಗಳಿವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.