ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡ್ರಗ್ಸ್ ಕೊಟ್ಟು ಕಳ್ಳತನ ಮಾಡಿಸುತ್ತಿದ್ದ ತಾಯಿ: ಕಳ್ಳ ಕೊನೆಗೂ ಸೆರೆ

Published 12 ಮೇ 2024, 15:38 IST
Last Updated 12 ಮೇ 2024, 15:38 IST
ಅಕ್ಷರ ಗಾತ್ರ

ಮುಂಬೈ: ಮುಂಬೈ ನಗರದಲ್ಲಿ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ತನಿಖೆ ವೇಳೆ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿದೆ. ಮಗನ ಕಳ್ಳತನದಲ್ಲಿ ತಾಯಿಯ ಪಾತ್ರವಿರುವುದು ಗೊತ್ತಾಗಿದೆ. ತಾಯಿಯೇ ಮಗನಿಗೆ ಡ್ರಗ್ಸ್ ನೀಡಿ ಕಳ್ಳತನಕ್ಕೆ ಕಳುಹಿಸುತ್ತಿದ್ದಳು ಎಂದು ತಿಳಿದು ಬಂದಿದೆ.

ಬಂಧಿತನನ್ನು 24 ವರ್ಷದ ಕೃಷ್ಣ ರವಿ ಮಹೇಶ್ಕರ್ ಎಂದು ಗುರುತಿಸಲಾಗಿದ್ದು, ಮುಂಬೈನ ವಿವಿಧ ಪೊಲೀಸ್ ಠಾಣೆಗಳಲ್ಲಿ 22ಕ್ಕೂ ಅಧಿಕ ಮನೆಗಳ್ಳತನ ಪ್ರಕರಣಗಳು ಆತನ ಮೇಲಿವೆ.

‘ಮಹೇಶ್ಕರ್ ವೃತ್ತಿಪರ ಕಳ್ಳನಾಗಿದ್ದು, ಅವರ ತಾಯಿ ವಿಜೇತಾ ಮಹೇಶ್ಕರ್(50) ಆತನ ಕಳ್ಳತನ ಪ್ರಕರಣಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮನೆ ಬಾಗಿಲು ಮುರಿದು ಕಳ್ಳತನ ಮಾಡಲು ಮಗನನ್ನು ಕಳುಹಿಸುತ್ತಿದ್ದ ತಾಯಿ, ಅದಕ್ಕೂ ಮುನ್ನ ಮಗನಿಗೆ ಡ್ರಗ್ಸ್ ನೀಡುತ್ತಿದ್ದಳು ಎಂಬುದು ತಿಳಿದು ಬಂದಿದೆ. ಮಗ ಕದ್ದ ವಸ್ತುಗಳನ್ನು ವಿಲೇವಾರಿ ಕೆಲಸವನ್ನು ತಾಯಿಯೇ ಮಾಡುತ್ತಿದ್ದಳು’ಎಂದು ಕಲಾಚೌಕಿ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ರಾಜೇಂದ್ರ ಚವಾಣ್ ಹೇಳಿದ್ದಾರೆ.

ತಲೆಮರೆಸಿಕೊಂಡಿರುವ ತಾಯಿ ವಿಜೇತಾ ಮಹೇಶ್ಕರ್ ಅವರ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕೇಂದ್ರ ಮುಂಬೈನ ಕಲಾಚೌಕಿಯಲ್ಲಿ ತಾಯಿ, ಮಗ ವಾಸವಿದ್ದರು.

ಯಾವುದೇ ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಯಾದ ದಿನವೇ ಆತ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅಗ್ರಿಪಾದಾ ಪ್ರದೇಶದಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT