ನವದೆಹಲಿ: ‘ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಹೆಚ್ಚಿದ ವಿಷಕಾರಿ ಗಾಳಿಯಿಂದ ನಾಲ್ಕರಲ್ಲಿ ಮೂರು ಮನೆಗಳ ಸದಸ್ಯರು ಕಣ್ಣುಗಳಲ್ಲಿ ಉರಿ, ತಲೆ ಸುತ್ತು, ಗಂಟಲು ಕೆರೆತ, ಕಫ ಹಾಗೂ ನಿದ್ರೆಯ ಕೊರತೆಯಿಂದ ಬಳಲುತ್ತಿದ್ದಾರೆ’ ಎಂದು ಆನ್ಲೈನ್ ಮೂಲಕ ಸಮೀಕ್ಷೆ ನಡೆಸಿದ ‘ಲೋಕಲ್ ಸರ್ಕರ್ಲ್ಸ್’ ಪ್ಲಾಟ್ಫಾರ್ಮ್ ತಿಳಿಸಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಟಿಸಿದ ಅಂಕಿಅಂಶಗಳ ಪ್ರಕಾರ, ‘ಮಾಲಿನ್ಯಕಾರಕ ಸೂಕ್ಷ್ಮಕಣಗಳ (ಪಿಎಂ) 2.5 ಪ್ರಮಾಣವು ಪ್ರತಿ ಘನಮೀಟರ್ಗೆ 488 ಮೈಕ್ರೋಗ್ರಾಂಗೆ ತಲುಪಿತ್ತು. ಇದು ಕಳೆದ ಐದು ವರ್ಷಗಳಲ್ಲಿಯೇ ಗರಿಷ್ಠ ಮಟ್ಟದ್ದಾಗಿದೆ. ದೀಪಾವಳಿ ದಿನವಾದ ಅಕ್ಟೋಬರ್ 20 ಹಾಗೂ ಮರುದಿನ ಮಾಲಿನ್ಯ ಪ್ರಮಾಣವು ಅತ್ಯಂತ ಗರಿಷ್ಠ ಪ್ರಮಾಣದಲ್ಲಿತ್ತು’ ಎಂದು ತಿಳಿಸಿದೆ.

ದೆಹಲಿ, ಗುರುಗ್ರಾಮ, ನೋಯಿಡಾ, ಫರೀದಾಬಾದ್, ಗಾಜಿಯಾಬಾದ್ನ 44 ಸಾವಿರ ಮಂದಿ ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ಮನೆಯಲ್ಲಿ ಒಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಮಂದಿ ಗಂಟಲು ಕೆರೆತ, ಕಫದಿಂದ ಬಳಲುತ್ತಿದ್ದಾರೆ ಎಂದು ಶೇಕಡಾ 42ರಷ್ಟು ಮಂದಿ ತಿಳಿಸಿದ್ದು, ಶೇಕಡಾ 25ರಷ್ಟು ಮಂದಿ ಕಣ್ಣಿನ ಉರಿ, ತಲೆನೋವಿನಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. ಉಳಿದ ಶೇಕಡಾ 17ರಷ್ಟು ಮಂದಿ ಉಸಿರಾಟದ ತೊಂದರೆ ಅಥವಾ ಅಸ್ತಮಾ ಉಲ್ಬಣಗೊಂಡಿರುವುದಾಗಿ ಹೇಳಿದ್ದಾರೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.