ಮುಂಬೈ: ನಟಿ ರಿಯಾ ಚಕ್ರವರ್ತಿ ಅವರ ತಂದೆಯು ಗುರುವಾರ ಸತತ ಮೂರನೇ ದಿನ ಸಿಬಿಐ ವಿಚಾರಣೆಗೆ ಹಾಜರಾದರು. ಇಲ್ಲಿನ ಡಿಆರ್‌ಡಿಒ ಅತಿಥಿಗೃಹದಲ್ಲಿ ಇರುವ ಸಿಬಿಐ ಕಚೇರಿಯಲ್ಲಿ ನಟ ಸುಶಾಂತ್ ಸಾವಿನ ಪ್ರಕರಣ ಕುರಿತು ವಿಚಾರಣೆಯು ನಡೆಯುತ್ತಿದೆ. ಕಳೆದ ಎರಡು ದಿನ ಸುಮಾರು 18 ಗಂಟೆ ಕಾಲ ಅವರ ವಿಚಾರಣೆ ನಡೆದಿದೆ.

ಅವರು ಗುರುವಾರ ಪೊಲೀಸ್ ಬೆಂಗಾವಲಿನಲ್ಲಿ ಸಿಬಿಐ ಕಚೇರಿಗೆ ಆಗಮಿಸಿದರು. ಪ್ರಕರಣದ ಮುಖ್ಯ ಆರೋಪಿಯಾಗಿರುವ ನಟಿ ರಿಯಾ ಅವರನ್ನು ಗುರುವಾರವೂ ವಿಚಾರಣೆಗೆ ಕರೆಸಿರಲಿಲ್ಲ. ನಟ ಸುಶಾಂತ್ ಆತ್ಮಹತ್ಯೆ ಪ್ರಕಣದಲ್ಲಿ ರಿಯಾ ಮತ್ತು ಅವರ ಕುಟುಂಬ ಸದಸ್ಯರ ಪಾತ್ರವಿದೆ ಎಂದು ಆರೋಪಿಸಲಾಗಿದೆ.

ಈ ಮುನ್ನ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದ ಮುಂಬೈ ಪೊಲೀಸರು ಸುಮಾರು 50 ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದರು. ಆದರೆ, ಸುಶಾಂತ್ ತಂದೆ ಬಿಹಾರದಲ್ಲಿ ದೂರು ದಾಖಲಿಸಿದ ನಂತರ ತನಿಖೆಯ ಹೊಣೆ ಹೊತ್ತುಕೊಂಡಿರುವ ಸಿಬಿಐ ತನಿಖೆಯನ್ನು ಚುರುಕುಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.