ನವದೆಹಲಿ: ಭಾರತದ ಮುಖ್ಯಮಂತ್ರಿಗಳ ಆಸ್ತಿಯನ್ನು ಪಟ್ಟಿ ಮಾಡಿರುವ ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ADR), ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ₹931 ಕೋಟಿ ಆಸ್ತಿಯೊಂದಿಗೆ ಅತ್ಯಂತ ಶ್ರೀಮಂತ ಹಾಗೂ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರು ₹15 ಲಕ್ಷ ಆಸ್ತಿಯೊಂದಿಗೆ ಕಡಿಮೆ ಆಸ್ತಿ ಹೊಂದಿರುವ ಮುಖ್ಯಮಂತ್ರಿಯಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ದೇಶದ ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಸರಾಸರಿ ಆಸ್ತಿ ಮೌಲ್ಯ ₹52.59 ಕೋಟಿ ಎಂದು ಅಂದಾಜಿಸಲಾಗಿದೆ.

ಭಾರತದ ತಲಾ ನಿವ್ವಳ ರಾಷ್ಟ್ರೀಯ ಆದಾಯವು 2023–24ರಲ್ಲಿ ಸರಾಸರಿ ₹1,85,854 ಎಂದು ಅಂದಾಜಿಸಲಾಗಿದೆ. ಮುಖ್ಯಮಂತ್ರಿ ಅವರ ತಲಾ ಆದಾಯದ ಸರಾಸರಿಯು ₹13,64,310 ಇದ್ದು, ಇದು ದೇಶದ ನಾಗರಿಕರ ತಲಾದಾಯಕ್ಕಿಂತ 7.3 ಪಟ್ಟು ಹೆಚ್ಚಳವಾಗಿದೆ. ದೇಶದ 31 ಮುಖ್ಯಮಂತ್ರಿಗಳ ಒಟ್ಟು ಆದಾಯ ₹1,630 ಎಂದು ವರದಿ ಹೇಳಿದೆ.

ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖುಂಡು ಅವರು 2ನೇ ಅತಿ ಶ್ರೀಮಂತ ಮುಖ್ಯಮಂತ್ರಿ ಎನಿಸಿದ್ದು, ಇವರ ಒಟ್ಟು ಆಸ್ತಿ ₹332 ಕೋಟಿಯಾಗಿದೆ. 3ನೇ ಸ್ಥಾನದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದು, ಇವರ ಒಟ್ಟು ಆಸ್ತಿ ಮೌಲ್ಯ ₹51 ಕೋಟಿಯಾಗಿದೆ.

ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಆಸ್ತಿ ₹55 ಲಕ್ಷ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಸ್ತಿ ₹1.18 ಕೋಟಿ ಇದ್ದು. ಇವರು ಮಮತಾ ಅವರ ನಂತರದ ಸ್ಥಾನದಲ್ಲಿದ್ದಾರೆ.

ಪೇಮಾ ಅವರು ₹180 ಕೋಟಿ ಸಾಲ ಹೊಂದಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದು, ₹23 ಕೋಟಿ ಸಾಲ ಪಡೆದಿದ್ದಾರೆ. ನಾಯ್ಡು ₹10 ಕೋಟಿ ಸಾಲ ಪಡೆದಿದ್ದಾರೆ ಎಂದು ವರದಿ ಹೇಳಿದೆ.

13 ಜನ ಮುಖ್ಯಮಂತ್ರಿಗಳು (ಶೇ 42ರಷ್ಟು) ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ಘೋಷಿಸಿಕೊಂಡಿದ್ದಾರೆ. 10 ಮುಖ್ಯಮಂತ್ರಿಗಳು (ಶೇ 32ರಷ್ಟು) ತಮ್ಮ ವಿರುದ್ಧ ಕೊಲೆ, ಅಪಹರಣ, ಲಂಚ ಮತ್ತು ಬೆದರಿಕೆ ಸೇರಿದಂತೆ ಗಂಭೀರ ಸ್ವರೂಪದ ಪ್ರಕರಣಗಳನ್ನು ಹೊಂದಿದ್ದಾರೆ.

ಸಿದ್ದರಾಮಯ್ಯ ವಿರುದ್ಧ 13 ಪ್ರಕರಣ

ನವದೆಹಲಿ: ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ. ತೆಲಂಗಾಣದ ರೇವಂತ್ ರೆಡ್ಡಿ ವಿರುದ್ಧ 89 ಅಪರಾಧ ಪ್ರಕರಣಗಳಿವೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ 13 ಪ್ರಕರಣಗಳಿವೆ.

ದೇಶದ 31 ಮುಖ್ಯಮಂತ್ರಿಗಳ ಅಪರಾಧ ಹಿನ್ನೆಲೆ, ಹಣಕಾಸು, ಶಿಕ್ಷಣ, ಲಿಂಗ ಹಾಗೂ ಇತರ ವಿಷಯಗಳ ಬಗ್ಗೆ ವಿಶ್ಲೇಷಣೆ ನಡೆಸಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸೋಮವಾರ ವರದಿ ಪ್ರಕಟಿಸಿದೆ. 31 ಮುಖ್ಯಮಂತ್ರಿಗಳ ಪೈಕಿ ಇಬ್ಬರು ಮಾತ್ರ ಮಹಿಳೆಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.