ನವದೆಹಲಿ: ಮತ್ತೊಮ್ಮೆ ಚೀತಾಗಳನ್ನು ದೇಶಕ್ಕೆ ತರುವ ವಿಚಾರವಾಗಿ ಆಫ್ರಿಕಾದ ಕೆಲವು ದೇಶಗಳೊಂದಿಗೆ ಭಾರತ ಮಾತುಕತೆ ನಡೆಸುತ್ತಿದೆ. ಬೋಟ್ಸ್ವಾನಾದಿಂದ ಡಿಸೆಂಬರ್ನಲ್ಲಿ 8–10 ಚೀತಾಗಳನ್ನು ತರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಅಳಿದುಹೋಗಿದ್ದ ಚೀತಾಗಳನ್ನು ಭಾರತದಲ್ಲಿ ಮರುಪರಿಚಯಿಸುವ ಮಹತ್ವದ ಯೋಜನೆಯು ‘ಅತ್ಯುತ್ತಮ ಯಶಸ್ಸು’ ಕಂಡಿದೆ. ಆರಂಭಿಕ ಸವಾಲುಗಳನ್ನು ಮೀರಿ ಯೋಜನೆಯು ಯಶಸ್ವಿಯಾಗಿದೆ ಎಂದು ‘ಪ್ರಾಜೆಕ್ಟ್ ಚೀತಾ’ಕ್ಕೆ ಸಂಬಂಧಿಸಿದ ಅಧಿಕಾರಿಗಳು ತಿಳಿಸಿದರು.

ಸದ್ಯ ಭಾರತದಲ್ಲಿಯೇ ಜನಿಸಿರುವ 16 ಚೀತಾಗಳು ಸೇರಿ ಒಟ್ಟು 27 ಚೀತಾಗಳಿವೆ ಎಂದು ಮೂಲಗಳು ತಿಳಿಸಿವೆ.

ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾ ಮರಿಗಳ ಬದುಕುಳಿಯುವಿಕೆ ದರವು ಶೇಕಡ 61ರಷ್ಟಿದೆ. ಇದಕ್ಕೆ ಪ್ರತಿಯಾಗಿ ಜಾಗತಿಕವಾಗಿ ಚೀತಾ ಮರಿಗಳ ಬದುಕುಳಿಯುವಿಕೆ ದರವು ಶೇ 40ರಷ್ಟಿದೆ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.