ನವದೆಹಲಿ: ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ ಮಕ್ಕಳ ಸರಣಿ ಸಾವಿನ ಪ್ರಕರಣ ಸಂಬಂಧ ಕೆಮ್ಮಿನ ಸಿರಪ್ ಅನ್ನು ಶಿಫಾರಸು ಮಾಡಿದ್ದ ಡಾ. ಪ್ರವೀಣ್ ಸೋನಿ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಪ್ರವೀಣ್ ಸೋನಿ ಅವರು ಪರಾಸಿಯಾದಲ್ಲಿರುವ ತಮ್ಮ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆದ ಹಲವಾರು ಮಕ್ಕಳಿಗೆ ‘ಕೋಲ್ಡ್ರಿಫ್’ ಕೆಮ್ಮಿನ ಸಿರಪ್ ಅನ್ನು ಶಿಫಾರಸು ಮಾಡಿದ್ದರು ಎಂದು ತಿಳಿದುಬಂದಿದೆ.

ಇದೇ ಪ್ರಕರಣ ಸಂಬಂಧ ಮಧ್ಯಪ್ರದೇಶ ಪೊಲೀಸರು ಶನಿವಾರ ಡಾ. ಸೋನಿ ಮತ್ತು ಕೆಮ್ಮಿನ ಸಿರಪ್ ತಯಾರಿಸಿದ ತಮಿಳುನಾಡು ಮೂಲದ ಶ್ರೀಸಾನ್ ಫಾರ್ಮಾಸ್ಯುಟಿಕಲ್ಸ್ನ ನಿರ್ವಾಹಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.

ಸೋನಿ ಮತ್ತು ಕೆಮ್ಮಿನ ಸಿರಪ್ ತಯಾರಕರ ವಿರುದ್ಧ ಭಾರತದ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯ ಸೆಕ್ಷನ್ 27(ಎ) ಮತ್ತು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 105 ಮತ್ತು 276ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಮಧ್ಯಪ್ರದೇಶ, ತಮಿಳುನಾಡು, ತೆಲಂಗಾಣ ಹಾಗೂ ಕೇರಳದಲ್ಲಿ ‘ಕೋಲ್ಡ್ರಿಫ್’ ಸಿರಪ್ ಮಾರಾಟವನ್ನು ನಿಷೇಧಿಸಲಾಗಿದೆ. ಮಾರುಕಟ್ಟೆಯಿಂದ ಈ ಸಿರಪ್ ಅನ್ನು ಹಿಂಪಡೆಯುವಂತೆಯೂ ಸೂಚಿಸಲಾಗಿದೆ.

ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಮೃತಪಟ್ಟಿರುವ ಬಗ್ಗೆ ವರದಿಯಾದ ಬೆನ್ನಲ್ಲೇ ಆರು ರಾಜ್ಯಗಳಲ್ಲಿ ಕೆಮ್ಮು ಸಿರಪ್ ಸೇರಿದಂತೆ ಇತರೆ 19 ಔಷಧಿಗಳ ಉತ್ಪಾದನಾ ಘಟಕಗಳಲ್ಲಿ ಕೇಂದ್ರ ಔಷಧ ನಿಯಂತ್ರಣ ಗುಣಮಟ್ಟ ಸಂಸ್ಥೆ (ಸಿಡಿಎಸ್ಸಿಒ) ತಪಾಸಣೆ ನಡೆಸಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಛಿಂದ್ವಾರ ಜಿಲ್ಲೆಯಲ್ಲಿ ಶಂಕಿತ ಮೂತ್ರಪಿಂಡ ವೈಫಲ್ಯದಿಂದಾಗಿ 14 ಮಕ್ಕಳ ಮೃತಪಟ್ಟಿವೆ. ಈ ಪೈಕಿ ಸೆಪ್ಟೆಂಬರ್ 7ರಿಂದ ಈಚೆಗೆ ಪರಾಸಿಯಾ ಉಪವಿಭಾಗದಲ್ಲಿ 10 ಮಕ್ಕಳು ಸಾವಿಗೀಡಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
.11 ಮಕ್ಕಳ ಸಾವಿಗೆ ಕೆಮ್ಮಿನ ಸಿರಪ್ ನಂಟು: ಆರೋಗ್ಯ ಸಚಿವಾಲಯದಿಂದ ತೀವ್ರ ತನಿಖೆ.ಮಕ್ಕಳ ಸಾವು | ಕೋಲ್ಡ್ರಿಫ್ ಸಿರಪ್ ತಯಾರಕರ ವಿರುದ್ಧ ಕಠಿಣ ಕ್ರಮಕ್ಕೆ CDSCO ಸೂಚನೆ.ಜೈಪುರ | 6 ವರ್ಷದ ಮಗು ಸಾವು: ಕೆಮ್ಮಿನ ಸಿರಪ್ ನೀಡಲಾಗಿತ್ತು ಎಂದು ಪೋಷಕರ ಮಾಹಿತಿ.11 ಮಕ್ಕಳ ಸಾವು: ತಮಿಳುನಾಡು ಬಳಿಕ ಕೇರಳದಲ್ಲಿ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ನಿಷೇಧ.ಮಕ್ಕಳ ಸರಣಿ ಸಾವು: ತಮಿಳುನಾಡಿನಲ್ಲಿ 'ಕೋಲ್ಡ್ರಿಫ್' ಕೆಮ್ಮಿನ ಸಿರಪ್ ನಿಷೇಧ.ಮಕ್ಕಳಲ್ಲಿ ಕೆಮ್ಮು: ಅನಗತ್ಯ ಔಷಧ ಶಿಫಾರಸು ಮಾಡದಂತೆ ಡಿಜಿಎಚ್ಎಸ್ ಸೂಚನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.