ಕೊಲಂಬೊ:ಚೀನಾದ ವಿವಾದಿತ ಹಡಗು ತನ್ನ ಬಂದರಿನಲ್ಲಿ ಲಂಗರು ಹಾಕಲು ಶ್ರೀಲಂಕಾ ಸಮ್ಮತಿಸಿದೆ. ‘ಈ ಹಡಗಿನ ಮೂಲಕ ದೇಶದ ಸೇನಾ ನೆಲೆಗಳ ಮೇಲೆ ಚೀನಾ ಕಣ್ಗಾವಲು ಇಡಬಹುದು’ ಎಂದು ಭಾರತ ತೀವ್ರ ಆತಂಕ ವ್ಯಕ್ತಪಡಿಸಿದೆ.

‘ಯಆನ್ ವಾಂಗ್ 5’ ಹಡಗನ್ನು ಸಂಶೋಧನಾ, ಸಮೀಕ್ಷಾ ಕಾರ್ಯಗಳಿಗೆ ಬಳಸಲಾಗುತ್ತದೆ ಎಂದೇ ಅಂತರರಾಷ್ಟ್ರೀಯ ವೆಬ್ಸೈಟ್ಗಳಲ್ಲಿ ಗುರುತಿಸಲಾಗಿದೆ. ಭಾರತದ ಮಾಧ್ಯಮಗಳ ಪ್ರಕಾರ, ಇದು ಬಹುಮುಖಿ ಉದ್ದೇಶದ ಕಣ್ಗಾವಲು ಹಡಗು ಆಗಿದೆ.

ಭಾರತ ಗಡಿಯ ಸಮುದ್ರ ಭಾಗದಲ್ಲಿ ಚೀನಾ ತನ್ನ ಅಸ್ತಿತ್ವವನ್ನು ಹೆಚ್ಚಿಸುತ್ತಿದೆ. ಶ್ರೀಲಂಕಾದ ಮೇಲೂ ಪ್ರಭಾವ ಬೀರುತ್ತಿದೆ ಎಂದು ಭಾರತ ಆರೋಪಿಸಿದೆ. ಭಾರತದ ಆಕ್ಷೇಪದ ಹಿನ್ನೆಲೆಯ ಅನಿರ್ದಿಷ್ಟ ಅವಧಿಗೆ ತಂಗುವುದನ್ನು ಮುಂದೂಡಲು ಶ್ರೀಲಂಕಾ ಕೋರಿತ್ತು.

ಆದರೆ, ಶ್ರೀಲಂಕಾದ ವಿದೇಶಾಂಗ ಸಚಿವ ನಿರ್ಮಲ್ ಪಿ.ಸಿಲ್ವಾ ಅವರು, ಹಡಗು ಆಗಸ್ಟ್ 16 ರಿಂದ 22ರ ಅವಧಿಯಲ್ಲಿ ಲಂಗರು ಹಾಕಬಹುದು ಎಂದು ವಿದೇಶಾಂಗ ಸಚಿವಾಲಯವು ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.