ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿ, ದೆಹಲಿ ಪೊಲೀಸರಿಂದ ಚೀನಾ ಮಹಿಳೆ ಬಂಧನ

Last Updated 21 ಅಕ್ಟೋಬರ್ 2022, 7:22 IST
ಅಕ್ಷರ ಗಾತ್ರ

ನವದೆಹಲಿ: ನೇಪಾಳದ ಪ್ರಜೆಯಂತೆ ವೇಷ ಧರಿಸಿ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪದ ಹಿನ್ನೆಲೆಯಲ್ಲಿ ಚೀನಾ ಮೂಲದ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಖಚಿತ ಮಾಹಿತಿ ಆಧರಿಸಿ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರ ವಿಶೇಷ ತಂಡ, ದೆಹಲಿಯ ಮಜ್ನು-ಕಾ-ತಿಲಾ ಪ್ರದೇಶದಲ್ಲಿ ಮಹಿಳೆಯನ್ನು ವಶಕ್ಕೆ ಪಡೆದಿದೆ. ಬಂಧಿತ ಮಹಿಳೆಯನ್ನು ‘ಕೈ ರೂವೋ’ ಎಂದು ಗುರುತಿಸಲಾಗಿದೆ.

ನೇಪಾಳದ ನಕಲಿ ದಾಖಲೆಗಳನ್ನು ಹೊಂದಿದ್ದ ಕೈ ರೂವೋ, ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಸಂಗತಿ ತನಿಖೆ ವೇಳೆ ದೃಢಪಟ್ಟಿದೆ ಎಂದು ಪೊಲೀದರು ತಿಳಿಸಿದ್ದಾರೆ.

ನೇಪಾಳದ ಕಠ್ಮಂಡುವಿನ ನಿವಾಸಿ ಡೊಲ್ಮಾ ಲಾಮಾ ಅವರ ಹೆಸರಿನಲ್ಲಿರುವ ನೇಪಾಳದ ಪೌರತ್ವ ಪ್ರಮಾಣಪತ್ರಗಳು‌‌‌‌ ಕೈ ರೂವೋ ಬಳಿ ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2019ರಲ್ಲಿ ರೂವೋ ಚೀನಾದ ಪ್ರಜೆಯಾಗಿ ಭಾರತಕ್ಕೆ ಬಂದಿದ್ದಾರೆ ಎಂದು ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿಯನ್ನು (ಎಫ್‌ಆರ್‌ಆರ್‌ಒ) ತಿಳಿದಿದೆ.

ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ವಿದೇಶಿಯರ ಕಾಯಿದೆ ಅಡಿಯಲ್ಲಿ ರೂವೋ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT