ಸರ್ದಾರ್ಪುರ (ರಾಜಸ್ಥಾನ): ಸರ್ದಾರ್ಪುರ ವಿಧಾನಸಭಾ ಕ್ಷೇತ್ರದಿಂದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೋಮವಾರ(ನ.6) ನಾಮಪತ್ರ ಸಲ್ಲಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಗೆಹಲೋತ್, 'ರಾಜ್ಯದ ಜನರು ಮತ್ತೆ ನಮ್ಮ ಸರ್ಕಾರವನ್ನು ಅಧಿಕಾರಕ್ಕೆ ತರುವತ್ತ ಚಿತ್ತ ಹರಿಸಿದ್ದಾರೆ' ಎಂದರು.

'ಹಿಂದೆ ರಾಜಸ್ಥಾನವನ್ನು ಹಿಂದುಳಿದ ರಾಜ್ಯ ಎಂದು ಕರೆಯಲಾಗುತ್ತಿತ್ತು. ಆದರೆ ನಾನು ಸಿಎಂ ಆದ ನಂತರ ಸಾಕಷ್ಟು ಬದಲಾವಣೆಯಾಗಿದೆ. ಇಂದು ರಾಜ್ಯದಲ್ಲಿ ಏಮ್ಸ್, ಐಐಟಿ, ಐಐಎಂ ಸೇರಿದಂತೆ ಇತರೆ ವಿಶ್ವವಿದ್ಯಾನಿಲಯಗಳಿವೆ. ನಾನು ಮೊದಲ ಬಾರಿಗೆ ಸಿಎಂ ಆದಾಗ ಕೇವಲ 6 ವಿಶ್ವವಿದ್ಯಾಲಯಗಳಿದ್ದವು. ಈಗ ಉನ್ನತ ಶಿಕ್ಷಣಕ್ಕೆ ಇನ್ನೂ ಹೆಚ್ಚಿನ ಒತ್ತು ನೀಡಲಾಗಿದೆ’ ಎಂದು ಸಿಎಂ ಹೇಳಿದರು.

ರಾಜಸ್ಥಾನ ವಿಧಾನಸಭೆಗೆ ನ.25ರಂದು ಚುನಾವಣೆ ನಡೆಯಲಿದ್ದು, ಡಿ.3ರಂದು ಮತ ಎಣಿಕೆ ನಡೆಯಲಿದೆ.
.ರಾಜಸ್ಥಾನ ಚುನಾವಣೆ: 22 ಅಭ್ಯರ್ಥಿಗಳ 6ನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.