ನವದೆಹಲಿ: ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಅಧ್ಯಕ್ಷೆ ಮಾಧವಿ ಪುರಿ ಬುಚ್ ವಿರುದ್ಧ ಕಾಂಗ್ರೆಸ್ ಪಕ್ಷ, ‘ಹಿತಾಸಕ್ತಿ ಸಂಘರ್ಷ’ದ ಹೊಸ ಆರೋಪ ಮಾಡಿದೆ.

ಮಾಧವಿ ಅವರು ಏಳು ವರ್ಷಗಳ ಹಿಂದೆ ಸೆಬಿಯ ಪೂರ್ಣಾವಧಿ ಸದಸ್ಯರಾಗಿ ಆಯ್ಕೆಯಾದ ಬಳಿಕವೂ ಐಸಿಐಸಿಐ ಬ್ಯಾಂಕ್‌ನಲ್ಲಿ ಲಾಭದ ಹುದ್ದೆಯಲ್ಲಿ ಮುಂದುವರಿದಿದ್ದಾರೆ ಎಂದು ಪಕ್ಷವು ಸೋಮವಾರ ಹೇಳಿದೆ. ಸಂಪುಟದ ನೇಮಕಾತಿ ಸಮಿತಿಯ (ಎಸಿಸಿ) ಮುಖ್ಯಸ್ಥರಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದೂ ಆಗ್ರಹಿಸಿದೆ.

ಬುಚ್ ಅವರು 2017ರ ಏಪ್ರಿಲ್ 5ರಿಂದ 2021ರ ಅಕ್ಟೋಬರ್ 4ರ ವರೆಗೆ ಸೆಬಿಯ ಪೂರ್ಣಾವಧಿ ಸದಸ್ಯರಾಗಿದ್ದರು. 2022ರ ಮಾರ್ಚ್ 2ರಿಂದ ಸೆಬಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅದಾನಿ ಸಮೂಹ ವಹಿವಾಟು ನಡೆಸುತ್ತಿದ್ದ ಬರ್ಮುಡಾ ಮತ್ತು ಮಾರಿಷಸ್‌ನ ‘ಶೆಲ್’ ಕಂಪನಿಗಳಲ್ಲಿ ಮಾಧವಿ ಪುರಿ ಮತ್ತು ಅವರ ಪತಿ ಪಾಲುದಾರಿಕೆ ಹೊಂದಿದ್ದಾರೆ ಎಂದು ಅಮೆರಿಕದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡೆನ್‌ಬರ್ಗ್ ರಿಸರ್ಚ್ ಈಚೆಗೆ ಆರೋಪಿಸಿತ್ತು. ಅದಾದ ಕೆಲದಿನಗಳ ಬಳಿಕ ಕಾಂಗ್ರೆಸ್ ಹೊಸ ಆರೋಪ ಮಾಡಿದೆ.

‘ಭಾರತದ ಮಧ್ಯಮ ವರ್ಗದವರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಸೆಬಿಗೆ ವಹಿಸಲಾಗಿದೆ. ಜನರು, ಸೆಬಿ ಮೇಲೆ ತಮ್ಮ ಭರವಸೆ ಇಟ್ಟುಕೊಂಡಿದ್ದಾರೆ. ಅದರ ಅಧ್ಯಕ್ಷರನ್ನು ಭಾರತದ ಪ್ರಧಾನಿ ನೇಮಕ ಮಾಡುತ್ತಾರೆ. ಆದರೆ ಸೆಬಿ ಹಲವು ಸಮಯಗಳಿಂದ ಜನರನ್ನು ವಂಚಿಸುತ್ತಾ ಬಂದಿದೆ’ ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಪವರ್ ಖೇರಾ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಸೆಬಿ ಅಧ್ಯಕ್ಷರ ಹಿತಾಸಕ್ತಿ ಸಂಘರ್ಷದ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಆದರೆ ಸರ್ಕಾರವು ಈ ಪ್ರಶ್ನೆಗಳನ್ನು ಸರಳವಾಗಿ ತಳ್ಳಿಹಾಕಿದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಹೇಳಿದ್ದಾರೆ.

ಪ್ರಧಾನಿ ನೇತೃತ್ವದ ಎಸಿಸಿ ಸೆಬಿ ಅಧ್ಯಕ್ಷರಿಗೆ ಸಂಬಂಧಿಸಿದ ಈ ಸಂಗತಿಗಳನ್ನು ಪರಿಶೀಲಿಸಿದೆಯೇ ಅಥವಾ ಎಸಿಸಿಯನ್ನು ಪ್ರಧಾನಿಗೆ ಸಂಪೂರ್ಣವಾಗಿ ಹೊರಗುತ್ತಿಗೆ ನೀಡಲಾಗಿದೆಯೇ?
ಜೈರಾಂ ರಮೇಶ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ

₹16.80 ಕೋಟಿ ವೇತನ

ಮಾಧವಿ ಬುಚ್ ಅವರು ಸೆಬಿಯ ಪೂರ್ಣಾವಧಿ ಸದಸ್ಯರು ಹಾಗೂ ಅಧ್ಯಕ್ಷರಾದ ಬಳಿಕ (2017ರ ನಂತರ) ವೇತನ ಮತ್ತು ಆದಾಯದ ರೂಪದಲ್ಲಿ ಐಸಿಐಸಿಐನಿಂದ ಒಟ್ಟು ₹ 16.80 ಕೋಟಿ ಪಡೆದಿದ್ದಾರೆ. ಇದೇ ಅವಧಿಯಲ್ಲಿ ಅವರು ಸೆಬಿಯಿಂದ ₹ 3.30 ಕೋಟಿ ಆದಾಯ ಗಳಿಸಿದ್ದಾರೆ. ಅಂದರೆ ಐಸಿಐಸಿಐನಿಂದ ಪಡೆದ ವೇತನವು ಸೆಬಿಯಿಂದ ಗಳಿಸಿದ ಆದಾಯಕ್ಕಿಂತ 5.09 ಪಟ್ಟು ಅಧಿಕ ಇದೆ’ ಎಂದು ಪವನ್ ಖೇರಾ ತಿಳಿಸಿದ್ದಾರೆ. ‘2017–2021ರ ಅವಧಿಯಲ್ಲಿ ವೇತನ ರೂಪದಲ್ಲಿ ₹12.63 ಕೋಟಿ ಗಳಿಸಿದ್ದಾರೆ. ಇದೇ ಅವಧಿಯಲ್ಲಿ ಐಸಿಐಸಿಐ ಪ್ರುಡೆನ್ಶಿಯಲ್‌ನಿಂದ ₹22.41 ಲಕ್ಷ ಆದಾಯ ಅವರಿಗೆ ಲಭಿಸಿದೆ. 2021–2023ರ ಅವಧಿಯಲ್ಲಿ ಐಸಿಐಸಿಐ ಬ್ಯಾಂಕ್‌ನ ನೌಕರರ ಷೇರು ಮಾಲೀಕತ್ವದ ಯೋಜನೆಯಡಿ (ಇಎಸ್‌ಒಪಿ) ₹ 2.84 ಕೋಟಿ ಪಡೆದಿದ್ದಾರೆ. ಇವೆಲ್ಲವೂ ಸೆಬಿಯ ನಿಯಮಗಳ ಉಲ್ಲಂಘನೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.