ನವದೆಹಲಿ:ಸಾವರ್ಕರ್ ಮತ್ತು ನಾಥೂರಾಮ್ ಗೋಡ್ಸೆ ನಡುವೆ ದೈಹಿಕ ಸಂಬಂಧವಿತ್ತು ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಸಮಿತಿ ಪ್ರಕಟಿಸಿರುವ ಕೈಪಿಡಿಯಲ್ಲಿ ಉಲ್ಲೇಖಿಸಿರುವುದು ತೀವ್ರ ವಿರೋಧಕ್ಕೆ ಗುರಿಯಾಗಿದೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮಿತ್ರಪಕ್ಷವಾಗಿರುವ ಶಿವಸೇನಾವೂ ಆಕ್ಷೇಪ ವ್ಯಕ್ತಪಡಿಸಿದೆ.

‘ಹೌ ಬ್ರೇವ್ ವಾಸ್ ವೀರ್ ಸಾರ್ವಕರ್’ ಕೈಪಿಡಿಯಯನ್ನು ಭೋಪಾಲ್‌ನ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಅಖಿಲ ಭಾರತ ಕಾಂಗ್ರೆಸ್ ಸೇವಾದಳ ತರಬೇತಿ ಶಿಬಿರದಲ್ಲಿ ಹಂಚಲಾಗಿತ್ತು.

ಇದನ್ನೂ ಓದಿ:ಸಾವರ್ಕರ್ ಬ್ರಿಟಿಷರ ಕ್ಷಮೆ ಕೋರಿದ್ದರು: ಗುಂಡೂರಾವ್

‘ಇದೊಂದು ಅಸಹ್ಯಕರ ಹೇಳಿಕೆ. ಗಾಂಧಿ ಮತ್ತು ನೆಹರು ಕುಟುಂಬದವರ ಹೊರತಾಗಿ ಉಳಿದ ನಾಯಕರನ್ನು ಕೆಣಕುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ’ ಎಂದು ಬಿಜೆಪಿ ಕಿಡಿಕಾರಿದೆ.

‘ಕಾಂಗ್ರೆಸ್ ನಾಯಕರ ವಿವಿಧ ಸಂಬಂಧಗಳು ಪ್ರಪಂಚಕ್ಕೆ ತಿಳಿದಿದೆ. ಆದರೆ, ಕೊಚ್ಚೆ ಮೇಲೆ ಕಲ್ಲೆಸೆಯಲು ಇಷ್ಟವಿಲ್ಲ. ಸಾರ್ವಕರ್ ಅವರನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ತೀರ ಕೆಳಮಟ್ಟಕ್ಕೆ ಇಳಿದಿದೆ. ಇಂತಹ ಅಸಹ್ಯಕರ ಹೇಳಿಕೆ ನೀಡಿರುವ ಕಾಂಗ್ರೆಸ್ ಜನರಿಗೆ ಉತ್ತರ ನೀಡಬೇಕಿದೆ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ಜೈನ್ ಹೇಳಿದ್ದಾರೆ.

ವಿಕೃತ ಹೇಳಿಕೆ ಉಲ್ಲೇಖಿಸಿರುವ ಕಾಂಗ್ರೆಸ್ ಕ್ಷಮೆ ಕೋರಬೇಕು ಎಂದು ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೇಲ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:‘ನಾನು ರಾಹುಲ್ ಸಾವರ್ಕರ್ ಅಲ್ಲ; ರೇಪ್ ಇನ್ ಇಂಡಿಯಾ ಹೇಳಿಕೆಗೆಕ್ಷಮೆ ಕೇಳಲ್ಲ’

ಸೇನಾ ಕಿಡಿ:‘ಸಾವರ್ಕರ್ ಅತ್ಯುತ್ತಮ ವ್ಯಕ್ತಿಯಾಗಿದ್ದು, ಅವರು ನಮ್ಮ ಮನಸ್ಸಿನಲ್ಲಿ ಅದೇ ಸ್ಥಾನದಲ್ಲಿ ಇರಲಿದ್ದಾರೆ. ಕೆಲವು ಜನರು ಅವರ ವಿರುದ್ಧ ಮಾತನಾಡುತ್ತಿದ್ದು, ಅವರ ತಲೆಯಲ್ಲಿ ತುಂಬಿರುವ ಹೊಲಸನ್ನು ಅದು ಪ್ರದರ್ಶಿಸುತ್ತದೆ’ ಎಂದು ಶಿವಸೇನಾ ಮುಖಂಡ ಸಂಜಯ್ ರಾವುತ್ ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.