ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ತಿವಾರಿ, ‘ಮೊದಲು ಜಾತಿಯ ಆಧಾರದಲ್ಲಿ, ನಂತರ ಧರ್ಮದ ಆಧಾರದ ಮೇಲೆ ಮತ್ತು ಈಗ ಜನಾಂಗದ ಆಧಾರದ ಮೇಲೆ ದೇಶವನ್ನು ಒಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ದೇಶವನ್ನು ಒಂದು ರಾಷ್ಟ್ರ ಎಂದು ಬಿಜೆಪಿ ಪರಿಗಣಿಸುತ್ತದೆ. ಆದರೆ, ದೇಶವನ್ನು ವಿವಿಧ ರಾಷ್ಟ್ರಗಳ ಗುಂಪು ಎಂದು ಕಾಂಗ್ರೆಸ್ ಪರಿಗಣಿಸುತ್ತದೆ ಹಾಗೂ ಪಕ್ಷವು ಹಿಂದೂ ಸಂಸ್ಕೃತಿಗೆ ವಿರುದ್ಧವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಯತಕಾಲಿಕೆಯ ಪಾಡ್‌ಕಾಸ್ಟ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಭಾರತದ ವೈವಿಧ್ಯವನ್ನು ವಿವರಿಸುವಾಗ, ‘ದೇಶದ ಪೂರ್ವ ಭಾಗದ ಜನರು ಚೀನಿಯರಂತೆ ಕಾಣುತ್ತಿದ್ದರೆ, ಪಶ್ಚಿಮದ ರಾಜ್ಯಗಳಲ್ಲಿರುವವರು ಅರಬ್ಬರ ಥರ ಕಾಣುತ್ತಾರೆ. ಅದೇ ರೀತಿ, ಉತ್ತರ ಭಾಗಗಳ ಜನರು ಬಹುಶಃ ಬಿಳಿಯರಂತೆ ಕಂಡರೆ, ದಕ್ಷಿಣದಲ್ಲಿರುವವರು ಆಫ್ರಿಕಾದವರಂತೆ ಕಾಣುತ್ತಾರೆ. ಈ ವೈವಿಧ್ಯದ ನಡುವೆಯೂ ನಾವು ಏಕತೆಯನ್ನು ಸಾಧಿಸಿದ್ದೇವೆ’ ಎಂದು ಪಿತ್ರೋಡಾ ಅವರು ಹೇಳಿದ್ದರು.