ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಪಾಕ್ ಗಡಿಯ ಹೊಲದಲ್ಲಿ ಬಾಂಬ್‌ ಪತ್ತೆ

Last Updated 4 ನವೆಂಬರ್ 2021, 22:15 IST
ಅಕ್ಷರ ಗಾತ್ರ

ಚಂಡೀಗಡ: ‘ದೀಪಾವಳಿಯ ಮುನ್ನಾದಿನ ಫಿರೋಜ್‌ಪುರ ಜಿಲ್ಲೆಯ ಭಾರತ-ಪಾಕಿಸ್ತಾನದ ಗಡಿಯ ಸಮೀಪ ಹೊಲವೊಂದರಲ್ಲಿ ಅಡಗಿಸಿಟ್ಟಿದ್ದ ಸ್ಫೋಟಕ ತುಂಬಿದ ಟಿಫಿನ್ ಬಾಕ್ಸ್ ಅನ್ನು ವಶಪಡಿಸಿಕೊಂಡಿದ್ದು, ಭಯೋತ್ಪಾದಕ ದಾಳಿಯ ಸಂಭವನೀಯ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ’ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ.

‘ಜಲಾಲಾಬಾದ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವಾರದ ಆರಂಭದಲ್ಲಿ ಮೂವರನ್ನು ಬಂಧಿಸಲಾಗಿತ್ತು. ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ ಬುಧವಾರ ಗಡಿ ಪ್ರದೇಶದ ಅಲಿ ಕೆ ಗ್ರಾಮದಲ್ಲಿ ಟಿಫಿನ್ ಬಾಕ್ಸ್‌ವೊಂದರಲ್ಲಿ ಬಾಂಬ್ ಇರುವುದು ಬೆಳಕಿಗೆ ಬಂದಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಫಿರೋಜ್‌ಪುರದ ಜುಗ್ಗೆ ನಿಹಂಗಾ ವಾಲೆ ಗ್ರಾಮದ ನಿವಾಸಿ ಜಸ್ವಂತ್ ಸಿಂಗ್ ಅಲಿಯಾಸ್ ಶಿಂದಾ ಬಾಬಾ ಮತ್ತು ಲುಧಿಯಾನದ ವಾಲಿಪುರ್ ಖುರ್ದ್ ಗ್ರಾಮದ ಬಲ್ವಂತ್ ಸಿಂಗ್ ಬಂಧಿತ ಆರೋಪಿಗಳು. ರಂಜೀತ್ ಸಿಂಗ್ ಅಲಿಯಾಸ್ ಗೋರಾ ಅವರನ್ನೂ ಬಂಧಿಸಲಾಗಿದೆ’ ಎಂದು ಡಿಜಿಪಿ ಇಕ್ಬಾಲ್ ಪ್ರೀತಿ ಸಿಂಗ್ ಸಾಹೋಟಾ ತಿಳಿಸಿದ್ದಾರೆ.

ಈ ಬಗ್ಗೆ ತನಿಖೆ ಮುಂದುವರಿದಿದ್ದು, ಇನ್ನೂ ಹೆಚ್ಚಿನ ಜನರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT