ಲಖನೌ: ಕೊರೊನಾ ವೈರಸ್ ಹರಡದಂತೆ ತಡೆಯಲು ಘೋಷಿಸಲಾಗಿರುವ ಲಾಕ್‌ಡೌನ್ ಆದೇಶ ಉಲ್ಲಂಘಿಸಿ ತಿರುಗಾಡುವವರ ಕಾಲಿಗೆ ಗುಂಡು ಹೊಡೆಯಿರಿ ಎಂದು ಉತ್ತರ ಪ್ರದೇಶದ ಗಾಜಿಯಾಬಾದ್‌ನ ಬಿಜೆಪಿ ಶಾಸಕ ನಂದಕಿಶೋರ್ ಗುರ್ಜರ್ ಪೊಲೀಸರಿಗೆ ಹೇಳಿದ್ದಾರೆ. ಗುಂಡು ಹೊಡೆಯುವ ಪೊಲೀಸರಿಗೆ ಬಹುಮಾನ ನೀಡುವುದಾಗಿಯೂ ಘೋಷಿಸಿದ್ದಾರೆ.

ಆದೇಶ ಉಲ್ಲಂಘಿಸುವವರನ್ನು ‘ದೇಶದ್ರೋಹಿಗಳು’ ಎಂದು ಕರೆದಿರುವ ಅವರು, ಅಂತಹವರ ಕಾಲಿಗೆ ಗುಂಡಿಕ್ಕುವ ಪೊಲೀಸರಿಗೆ ₹ 5,100 ಬಹುಮಾನ ನೀಡುವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕೊರೊನಾ ಜಾಗೃತಿ: ರಾಜಸ್ಥಾನ ವೈದ್ಯರ ‘ಛೋಡೋ ಕಲ್ಕೀ ಬಾತೇ’ ಹಾಡಿನ ವಿಡಿಯೊ ವೈರಲ್

‘ಮುಸ್ಲಿಮರು ಮಸೀದಿಗಳಲ್ಲಿ ಸಾಮೂಹಿಕವಾಗಿ ಸೇರುತ್ತಿರು ಬಗ್ಗೆ ತಿಳಿದುಬಂದಿದೆ. ಅಂತಹವರ ಜತೆ ಪೊಲೀಸರು ಶಿಸ್ತಿನಿಂದ ವರ್ತಿಸಬೇಕಿದೆ. ಅಗತ್ಯಬಿದ್ದಲ್ಲಿ ಕಾಲಿಗೆ ಗುಂಡಿಕ್ಕುವ ಬಗ್ಗೆಯೂ ಗಮನಿಸಬೇಕಿದೆ’ ಎಂದು ಗುರ್ಜರ್ ಹೇಳಿದ್ದಾರೆ.

ಕೊರೊನಾ ವೈರಸ್ ಗೋಶಾಲೆಗಳನ್ನು ಪ್ರವೇಶಿಸುವುದಿಲ್ಲ ಎಂದು ಗುರ್ಜರ್ ಈ ಹಿಂದೆ ನೀಡಿದ್ದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ಗೆ ಗುರಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.