ನವದೆಹಲಿ: ಕೊರೊನಾವೈರಸ್ ವ್ಯಾಪಕವಾಗಿ ಹರಡಿರುವುದರಿಂದ ಕಚೇರಿಗೆ ಹೋಗಿ ಕೆಲಸ ಮಾಡುತ್ತಿರುವವರು ಮನೆಯಿಂದಲೇ ಕೆಲಸ ಮಾಡಬೇಕಾಗ ಪರಿಸ್ಥಿತಿ ಬಂದೊದಗಿದೆ. ಅದೇ ವೇಳೆ ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರ ತಮ್ಮಅಧಿಕಾರಿಗಳಿಗೆ ಮತ್ತು ನೌಕರರಿಗೆವರ್ಷದ 15 ದಿನಗಳು ಮನೆಯಿಂದಲೇ ಕಚೇರಿ ಕೆಲಸ ಮಾಡುವ (ವರ್ಕ್ ಫ್ರಂ ಹೋಮ್) ಸೌಲಭ್ಯ ನೀಡುವ ಬಗ್ಗೆ ಕರಡು ರೂಪಿಸಿದೆ.

ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ದೂರುಗಳ ಇಲಾಖೆ(ಡಿಎಆರ್‌ಪಿಜಿ) ಈ ಬಗ್ಗೆ ಕರಡು ರೂಪಿಸಿದ್ದು, ಇತರ ಸಚಿವಾಲಯ ಮತ್ತು ಇಲಾಖೆಗಳೊಂದಿಗೆ ವರ್ಕ್ ಫ್ರಂ ಹೋಮ್ ವ್ಯವಸ್ಥೆ ಬಗ್ಗೆ ಚರ್ಚೆ ನಡೆಸಿದೆ. ಮುಂಬರುವ ದಿನಗಳಲ್ಲಿ ಕಚೇರಿಯಲ್ಲಿ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಈ ವ್ಯವಸ್ಥೆ ಅಳವಡಿಸಲಾಗುವುದು.

ಲಾಕ್‌ಡೌನ್ ಮುಗಿದ ನಂತರವೂ ಇದೇ ರೀತಿಯ ವ್ಯವಸ್ಥೆ ಮುಂದುವರಿಸಿ ಹೋಗುವ ಅಗತ್ಯವಿದೆ. ಮನೆಯಲ್ಲಿಯೇ ಕುಳಿತು ಸರ್ಕಾರಿ ಕಡತಗಳನ್ನು ಬಳಸುವಾಗ ಅಲ್ಲಿ ಮಾಹಿತಿಯ ಸುರಕ್ಷೆ ಮತ್ತು ಗೌಪ್ಯತೆ ಬಗ್ಗೆ ಗಮನಹರಿಸಬೇಕಿದೆ ಎಂದು ಡಿಎಆರ್‌ಪಿಜಿ ಹೇಳಿದೆ.

ಪ್ರಸ್ತುತ ಡೆಪ್ಯುಟಿ ಕಾರ್ಯದರ್ಶಿ ಅವರ ಶ್ರೇಣಿಗಿಂತ ಮೇಲೆ ಇರುವವರು ಕಚೇರಿಗೆ ಬಂದು ಕೆಲಸ ಮಾಡುತ್ತಿದ್ದಾರೆ. ಅದೇ ವೇಳೆ ಶೇ.33ರಷ್ಟು ಅಧಿಕಾರಿಗಳು ಮತ್ತು ಈ ಶ್ರೇಣಿಗಿಂತ ಕೆಳಗಿರುವ ನೌಕರರು ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಿದ್ದಾರೆ.ಈ ಅಧಿಕಾರಿಗಳು ಮನೆಯಿಂದಲೇ ಕಚೇರಿ ಕೆಲಸ ನಿರ್ವಹಿಸುವಾಗ ಇ-ಆಫೀಸ್ ಮತ್ತು ನ್ಯಾಷನಲ್ ಇನ್‌ಫಾರ್ಮಟಿಕ್ಸ್ ಸೆಂಟರ್ (ಎನ್‌ಐಸಿ) ಅಭಿವೃದ್ಧಿ ಪಡಿಸಿದ ವಿಡಿಯೊ ಕಾನ್ಫರೆನ್ಸಿಂಗ್ ಸೌಲಭ್ಯದ ಮೂಲಕ ವರ್ಚ್ಯುವಲ್ ಮೀಟಿಂಗ್ ನಡೆಸುತ್ತದೆ. ಸರ್ಕಾರದಲ್ಲಿ ಈ ರೀತಿ ಅನುಭವ ಇದೇ ಮೊದಲು.

ಡಿಎಆರ್‌ಪಿಜಿ ರೂಪಿಸಿರುವಕರಡುಗಳಿಗೆಮೇ. 21ರೊಳಗೆ ಪ್ರತಿಕ್ರಿಯಿಸುವಂತೆ ಸಚಿವಾಲಯಗಳಿಗೆ ಮತ್ತು ಇಲಾಖೆಗಳಿಗೆ ಹೇಳಲಾಗಿದೆ.

ಕಳೆದ 50 ದಿನಗಳಲ್ಲಿ ಹೆಚ್ಚಿನ ಅಧಿಕಾರಿಗಳು ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ)ಯು ಅಧಿಕಾರಿಗಳಿಗೆ ಮತ್ತು ನೌಕರರಿಗೆ ವರ್ಷದಲ್ಲಿ15 ದಿನಗಳ ಕಾಲ ಮನೆಯಿಂದಲೇ ಕಚೇರಿ ಕೆಲಸಮಾಡುವ ಸೌಲಭ್ಯ ನೀಡಿಬೇಕು ಎಂದು ಡಿಎಆರ್‌ಪಿಜಿ ಸಲಹೆ ನೀಡಿದೆ.

ಆದಾಗ್ಯೂ, ಮನೆಯಿಂದಲೇ ಕಚೇರಿ ಕೆಲಸ ಮಾಡುವಾಗ ನಿರ್ದಿಷ್ಟ ದಾಖಲೆಗಳನ್ನು ಯಾವ ರೀತಿ ನಿರ್ವಹಿಸಬೇಕು ಎಂಬುದರ ಬಗ್ಗೆ ಕಾಳಜಿ ವಹಿಸಬೇಕು.ನಿರ್ದಿಷ್ಟ ಮಾಹಿತಿಗಳನ್ನು ಇ-ಆಫೀಸ್ ಮೂಲಕ ಹಂಚುವಾಗ ಗೃಹ ಸಚಿವಾಲಯದ ಸಲಹೆ ಸೂಚನೆಗಳನ್ನು ಪಾಲಿಸಬೇಕು. ಈ ರೀತಿ ಕಡತಗಳನ್ನು ಹಂಚುವಾಗ ಅದರ ಗೌಪ್ಯತೆ ಕಾಪಾಡಲು ನಿರ್ದಿಷ್ಟ ಎಸ್‍ಒಪಿ ಬಳಸಬೇಕು ಎಂದು ಕರಡು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ವರ್ಚ್ಯುವಲ್ ಮೀಟಿಂಗ್ ವೇಳೆ ಅಧಿಕಾರಿಗಳು ಕಚೇರಿಯಲ್ಲಿನ ವಾತಾವರಣದಲ್ಲಿರುವಂತೆಯೇ ವರ್ತಿಸಬೇಕು. ಅಂತರ ಕಾಯ್ದುಕೊಳ್ಳುವುದಕ್ಕಾಗಿ ಕಚೇರಿಯಲ್ಲಿಯೂ ವಿಡಿಯೊ ಕಾನ್ಫರೆನ್ಸಿಂಗ್ ಮಾಡುವುದು ಒಳ್ಳೆಯದು.

ಲ್ಯಾಪ್‌ಟಾಪ್ ಮತ್ತು ಡೆಸ್ಕ್‌ಟಾಪ್‌ಗಳನ್ನು ನೌಕರರಿಗೆ ಒದಗಿಸಬೇಕು.ಮನೆಯಲ್ಲಿ ಕೆಲಸ ಮಾಡುವ ನೌಕರರಿಗೆ ಪಾಳಿಗೆ ತಕ್ಕಂತೆ ಲ್ಯಾಪ್‌ಟಾಪ್‌ಗಳನ್ನು ಒದಗಿಸಬೇಕಿದ್ದು, ಇದಕ್ಕೆ ಸರಕು ಸಾಗಣಿಕೆ ವ್ಯವಸ್ಥೆಯಸಹಾಯ ಪಡೆಯಬಹುದಾಗಿದೆ. ಮನೆಯಲ್ಲಿಯೇ ಕಚೇರಿ ಕೆಲಸ ಮಾಡುವವರಿಗೆ ಡೇಟಾ ಬಳಕೆಯ ಹಣ ಮರುಪಾವತಿ ಮಾಡಲಾಗುವುದು.

ಕೆಲಸ ಸುಲಲಿತವಾಗಿ ಸಾಗಲು ಪ್ರಮುಖ ಕಡತಗಳ ಬಗ್ಗೆ ನೌಕರರಿಗೆ ಪಠ್ಯ ಸಂದೇಶ ಅಥವಾ ಇಮೇಲ್ ಕಳುಹಿಸಿ ಮೊದಲೇ ಸೂಚನೆ ನೀಡಬೇಕು.ಎನ್ಐಸಿ ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು.ಮನೆಯಲ್ಲಿಯೇ ಕೆಲಸ ಮಾಡುವಾಗ ಕಡತಗಳನ್ನು ಪರಿಶೀಲಿಸಲು ಸಹಾಯವಾಗುವ ಪ್ರಧಾನ ದಾಖಲೆ ಮತ್ತು ಸುತ್ತೋಲೆಗಳು ಇ- ಆಫೀಸ್‌ಲ್ಲಿ ಸಿಗುವಂತಾಗಬೇಕು.

ತಮ್ಮದೇ ಸ್ವಂತ ಲ್ಯಾಪ್‌ಟಾಪ್/ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವರು ಅದನ್ನು ನಿಯಮಿತವಾಗಿ ಅಪ್‌ಡೇಟ್ ಮಾಡಿಕೊಂಡಿರಬೇಕು.ಆ್ಯಂಟಿವೈರಸ್ ಸ್ಕ್ಯಾನ್ ಮಾಡಬೇಕು, ಮಾಹಿತಿ ಕದಿಯುವ ಅಥವಾ ಹಾನಿಯನ್ನುಂಟು ಮಾಡುವ ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡಬೇಕು.ಮಾಹಿತಿ ಕಳ್ಳತನವಾಗದಂತೆ ಸಿಸ್ಟಂಗಳ ಸುರಕ್ಷತೆಯನ್ನು ಖಾತ್ರಿ ಪಡಿಸಲು ಎನ್‌ಐಸಿ ಸಹಾಯ ಮಾಡಬೇಕು, ಹಿರಿಯ ಅಧಿಕಾರಿಗಳ ನಿರ್ದೇಶನಂದಂತೆ ಫೋನ್ ಮೂಲಕವೂ ಮನೆಯಿಂದಲೇ ಕಚೇರಿ ಕೆಲಸ ಮಾಡಬಹುದು ಎಂದು ಪ್ರಸ್ತಾವಿಕ ಕರಡುನಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.