ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ), ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ರಾಜಕೀಯ ವಾಕ್ಸಮರ ಜೋರಾಗಿದೆ.

ಕಾಂಗ್ರೆಸ್ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಮಾತನಾಡಿ, ‘ಮದ್ಯದ ಕಂಪನಿಗಳೊಂದಿಗೆ ಕೆಲವು ಒಪ್ಪಂದಗಳನ್ನು ಮಾಡಿಕೊಳ್ಳುವ ಮೂಲಕ ಹಣ ಪಡೆಯುವಂತೆ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದರು’ ಎಂದು ಎಎಪಿ ಶಾಸಕ ಶರದ್ ಚೌಹಾಣ್ ಆರೋಪಿಸಿರುವ ಆಡಿಯೊ ಕ್ಲಿಪ್ ಅನ್ನು ಬಿಡುಗಡೆ ಮಾಡಿದ್ದಾರೆ.

‘ದೆಹಲಿಯಾದ್ಯಂತ ಮದ್ಯದಂಗಡಿಗಳನ್ನು ತೆರೆಯುವುದರಿಂದ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದಂತಾಗುತ್ತದೆ ಎಂದು ಸಿಸೋಡಿಯಾಗೆ ಚೌಹಾಣ್ ಹೇಳಿರುವುದು ಆಡಿಯೊದಲ್ಲಿ ಕೇಳಿಬರುತ್ತದೆ. ಚುನಾವಣೆಗೆ ಹಣದ ಅಗತ್ಯವಿದೆ ಎಂಬ ಕಾರಣಕ್ಕೆ ಎಎಪಿ ನಾಯಕರು ಹಗರಣಗಳಲ್ಲಿ ಭಾಗಯಾಗಿದ್ದಾರೆ. ಈ ಎಲ್ಲಾ ಕಾರಣಗಳಿಂದ ಎಎಪಿಯನ್ನು ‘ಅಲ್ಕೋಹಾಲ್ ಅಫೆಕ್ಟೆಡ್ ಪಾರ್ಟಿ’ (ಮದ್ಯ ಪೀಡಿತ ಪಕ್ಷ) ಎಂದರೆ ತಪ್ಪಿಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಮದ್ಯಪಾನ ಚಟವು ಇಡೀ ಕುಟುಂಬವನ್ನು ನಾಶಪಡಿಸುತ್ತದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಮದ್ಯದಿಂದ ಹಣ ಸಂಪಾದಿಸುವ ಚಟವು ಇಡೀ ರಾಜ್ಯವನ್ನು ಹೇಗೆ ನಾಶಪಡಿಸಿದೆ ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. ದೆಹಲಿಯ ವಿಶ್ವದರ್ಜೆಯ ಮೂಲಸೌಕರ್ಯವನ್ನು ನಾಶಪಡಿಸಿರುವ ಎಎಪಿ ನಾಯಕರನ್ನು ಅಧಿಕಾರದಿಂದ ಕೆಳಗಿಳಿಸುವ ಸಮಯ ಬಂದಿದೆ’ ಎಂದು ಖೇರಾ ತಿಳಿಸಿದ್ದಾರೆ.
.ದೆಹಲಿಗೆ ಬೇಕು ಶೀಲಾ ಅಭಿವೃದ್ಧಿ, ಮೋದಿ-ಕೇಜ್ರಿವಾಲ್ ಸುಳ್ಳು ಪ್ರಚಾರವಲ್ಲ: ರಾಹುಲ್.Delhi Polls|ಪೊಲೀಸರ ನೆರವಿನಿಂದ AAP ಪ್ರಚಾರಕ್ಕೆ BJP ಅಡ್ಡಿ:ಕೇಜ್ರಿವಾಲ್ ಆರೋಪ.Delhi Polls| ಕೇಜ್ರಿವಾಲ್ರಿಂದ ಹಣ, ಸೀರೆ, ಕುರ್ಚಿ ಹಂಚಿಕೆ ಆರೋಪ: ಬಿಜೆಪಿ ದೂರು.Delhi Polls | ಮಹಿಳೆಯರಿಗೆ ₹2,500 ಮಾಸಿಕ ನೆರವು, ₹500ಗೆ LPG: ಬಿಜೆಪಿ ಭರವಸೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.