ನವದೆಹಲಿ: 2017ರಲ್ಲಿ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪದ ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ಮೇಲೆ ವಿಧಿಸಿದ್ದ 12 ವರ್ಷ ಜೈಲುಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿದೆ. ಸಂತ್ರಸ್ತೆಯ ಸಾಕ್ಷ್ಯವು ವಿಶ್ವಾಸಾರ್ಹವಾಗಿದ್ದರೆ, ಅಪರಾಧಿಗೆ ಶಿಕ್ಷೆ ನೀಡಲು ಈ ಹೇಳಿಕೆಯನ್ನಷ್ಟೇ ನ್ಯಾಯಾಲಯವು ಅವಲಂಬಿಸಬಹುದು ಎಂದು ಕೋರ್ಟ್ ಹೇಳಿದೆ.

ಅತ್ಯಾಚಾರ ಪ್ರಕರಣದ ಅಪರಾಧಿ ಟೋನಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಮನೋಜ್ ಕುಮಾರ್ ಒಹ್ರಿ ಈ ಆದೇಶ ನೀಡಿದ್ದಾರೆ.

‘ಒಂದೊಮ್ಮೆ ಸಂತ್ರಸ್ತೆಯು ಘಟನೆಯ ಏಕೈಕ ಸಾಕ್ಷಿಯಾಗಿದ್ದು, ಆಕೆಯ ಹೇಳಿಕೆಯು ವಿಶ್ವಾಸಾರ್ಹವಾಗಿದ್ದರೆ ಶಿಕ್ಷೆಯನ್ನು ಅದು ಖಾತರಿಪಡಿಸುತ್ತದೆ ಎಂದೇ ಕಾನೂನು ಹೇಳುತ್ತದೆ’ ಎಂದು ನ್ಯಾಯಮೂರ್ತಿಯವರು ತಿಳಿಸಿದ್ದಾರೆ.

‘ಅಪರಾಧಿಯು ಬಾಲಕಿ ಓದುತ್ತಿದ್ದ ಶಾಲೆಯ ಪಕ್ಕದಲ್ಲೇ ಮರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಕಚೋರಿ ಕೊಡಿಸುವುದಾಗಿ ಬಾಲಕಿಗೆ ಆಮಿಷವೊಡ್ಡಿ, ತನ್ನ ಅಂಗಡಿಗೆ ಕರೆದೊಯ್ದ ಅಲ್ಲಿಯೇ ಆಕೆಯ ಮೇಲೆ ನಿರಂತರ ಅತ್ಯಾಚಾರವೆಸಗಿದ್ದ. ದೌರ್ಜನ್ಯವೆಸಗಿದ ವಿಚಾರವನ್ನು ಬಹಿರಂಗಪಡಿಸಿದರೆ, ಚರಂಡಿಯಲ್ಲಿ ಮುಳುಗಿಸುವುದಾಗಿ ಅಥವಾ ಮರವನ್ನು ಕತ್ತರಿಸಿದಂತೆ ತುಂಡು ತುಂಡು ಮಾಡುವುದಾಗಿ ಬೆದರಿಕೆ ಹಾಕಿದ್ದ’ ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ.

‘ಸಂತ್ರಸ್ತೆಯ ನಿಲುವು ಸ್ಥಿರವೂ ವಿಶ್ವಾಸಾರ್ಹವೂ ಆಗಿದ್ದು, ಆರೋಪಿಯು ಪಾಟೀ ಸವಾಲಿನಲ್ಲಿ ಆಕೆಯ ಸಾಕ್ಷ್ಯವನ್ನು ತಳ್ಳಿಹಾಕಲು ಸಾಧ್ಯವಾಗಿಲ್ಲ’ ಎಂದು ನ್ಯಾಯಮೂರ್ತಿ ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.