ನವದೆಹಲಿ: ದೆಹಲಿಯಲ್ಲಿ ಜೂನ್ 27ರ ನಂತರ ಇದೇ ಮೊದಲ ಬಾರಿಗೆ ಕೋವಿಡ್–19 ದೃಢಪಟ್ಟ ಪ್ರಕರಣಗಳ ಸಂಖ್ಯೆ 100ರ ಗಡಿ ದಾಟಿದೆ. ಭಾನುವಾರ 107 ಹೊಸ ಪ್ರಕರಣಗಳು ದಾಖಲಾಗಿದ್ದು, ಒಬ್ಬ ವ್ಯಕ್ತಿ ಸಾವಿಗೀಡಾಗಿರುವುದು ಆರೋಗ್ಯ ಇಲಾಖೆಯ ಪ್ರಕಟಣೆಯಿಂದ ತಿಳಿದು ಬಂದಿದೆ.

ಜೂನ್ 27ರಂದು ದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟ 259 ಪ್ರಕರಣಗಳು ಹಾಗೂ ನಾಲ್ಕು ಮಂದಿ ಸಾವಿಗೀಡಾಗಿರುವುದು ವರದಿಯಾಗಿತ್ತು. ಶನಿವಾರ ದೆಹಲಿಯಲ್ಲಿ 86 ಹೊಸ ಪ್ರಕರಣಗಳು ಹಾಗೂ ಶುಕ್ರವಾರ 69 ಹೊಸ ಪ್ರಕರಣಗಳು ದಾಖಲಾಗಿದ್ದವು.

ಶುಕ್ರವಾರ ಒಂದೇ ದಿನ ಕೊರೊನಾ ವೈರಸ್‌ನ ಹೊಸ ತಳಿ ಓಮೈಕ್ರಾನ್ ದೃಢಪಟ್ಟ 12 ಪ್ರಕರಣಗಳು ದಾಖಲಾಗುವ ಮೂಲಕ ದೆಹಲಿಯಲ್ಲಿ ಓಮೈಕ್ರಾನ್ ಒಟ್ಟು ಪ್ರಕರಣಗಳ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ದೇಶದಾದ್ಯಂತ ಒಟ್ಟು 151 ಓಮೈಕ್ರಾನ್ ಪ್ರಕರಣಗಳಿವೆ.

ಈವರೆಗೂ ದೆಹಲಿಯಲ್ಲಿ 14,42,197 ಪ್ರಕರಣಗಳು ದಾಖಲಾಗಿದ್ದು, 14.16 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ. ಸೋಂಕಿನಿಂದ ಒಟ್ಟು 25,101 ಮಂದಿ ಮೃತಪಟ್ಟಿದ್ದಾರೆ.

ದೇಶದಲ್ಲಿ ಓಮೈಕ್ರಾನ್ ಪ್ರಕರಣ 151ಕ್ಕೆ ಏರಿಕೆ

ಬ್ರಿಟನ್‌ನಿಂದ ಇತ್ತೀಚೆಗೆ ಗುಜರಾತ್‌ಗೆ ಬಂದಿದ್ದ 45 ವರ್ಷದ ವ್ಯಕ್ತಿ ಮತ್ತು ಒಬ್ಬ ಹುಡುಗನಿಗೆ ಓಮೈಕ್ರಾನ್ ಸೋಂಕು ತಗುಲಿರುವುದು ಭಾನುವಾರ ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಓಮೈಕ್ರಾನ್ ಪ್ರಕರಣಗಳ ಸಂಖ್ಯೆ 145ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: ಕೋವಿಡ್ ಲಸಿಕೆ: ಅಂಡಮಾನ್ ನಿಕೋಬರ್ ದ್ವೀಪದಲ್ಲಿ ಶೇ. 100ರಷ್ಟು ಗುರಿ ಸಾಧನೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾಹಿತಿ ಪ್ರಕಾರ, ಒಟ್ಟು 11 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಓಮೈಕ್ರಾನ್ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 54 ಪ್ರಕರಣಗಳು, ದೆಹಲಿಯಲ್ಲಿ 22, ರಾಜಸ್ಥಾನದಲ್ಲಿ 17, ಕರ್ನಾಟಕದಲ್ಲಿ 14, ತೆಲಂಗಾಣದಲ್ಲಿ 20, ಗುಜರಾತ್‌ನಲ್ಲಿ 9, ಕೇರಳದಲ್ಲಿ 11, ಆಂಧ್ರ ಪ್ರದೇಶದ, ಚಂಡೀಗಡ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.