ನವದೆಹಲಿ: ದೆಹಲಿಯ ಕೆಂಪು ಕೋಟೆ ಸಮೀಪದಲ್ಲಿ ನಡೆದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವೈದ್ಯರು ಹಾಗೂ ಧಾರ್ಮಿಕ ಬೋಧಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಶಕ್ಕೆ ಪಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರು ಸ್ಫೋಟದ ಬೆನ್ನಲ್ಲೇ ಮುಜಮ್ಮಿಲ್ ಗನಿ, ಅದಿಲ್ ರಾಥರ್, ಶಹೀನಾ ಸಯೀದ್ ಮತ್ತು ಮೌಲ್ವಿ ಇರ್ಫಾನ್ ಅಹ್ಮದ್ ಅವರನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಬಂಧಿಸಿದ್ದರು.

ದೆಹಲಿ ಸ್ಫೋಟದಲ್ಲಿ ಅಮಾಯಕರ ಸಾವಿಗೆ ಕಾರಣವಾದ ಭಯೋತ್ಪಾದಕ ದಾಳಿಯಲ್ಲಿ ಆರೋಪಿಗಳ ಪಾತ್ರ ಅಡಗಿದೆ ಎಂದು ಎನ್ಐಎ ವಕ್ತಾರರು ತಿಳಿಸಿದ್ದಾರೆ.

ನವೆಂಬರ್ 11ರಂದು ಪ್ರಕರಣವನ್ನು ಎನ್ಐಎಗೆ ವರ್ಗಾಯಿಸಲಾಗಿತ್ತು. ಇದರೊಂದಿಗೆ ಪ್ರಕರಣ ದಾಖಲಿಸಲ್ಪಟ್ಟವರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.

ಎನ್ಐಎ ಈಗಾಗಲೇ ಅಮೀರ್ ರಶೀದ್ ಅಲಿ ಮತ್ತು ಜಾಸಿರ್ ಬಿಲಾಲ್ ವಾನಿ ಅಲಿಯಾಸ್ ಡ್ಯಾನಿಶ್ ಎಂಬಾತನನ್ನು ಬಂಧಿಸಿದೆ.
.Delhi Red Fort Blast: ಸಹ ಸಂಚುಕೋರ ಬಿಲಾಲ್ 10 ದಿನ ಎನ್ಐಎ ಕಸ್ಟಡಿಗೆ .Delhi Blast | ಆತ್ಮಾಹುತಿ ದಾಳಿ ‘ಹುತಾತ್ಮ ಕಾರ್ಯಾಚರಣೆ‘: ಉಮರ್ ವಿಡಿಯೊ ಬಹಿರಂಗ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.