ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಯಾಣಿಕರಿಗೆ ಪರಿಹಾರ ನೀಡದ ಏರ್‌ ಇಂಡಿಯಾಗೆ ₹10 ಲಕ್ಷ ದಂಡ ವಿಧಿಸಿದ DGCA

Published 29 ಆಗಸ್ಟ್ 2024, 11:34 IST
Last Updated 29 ಆಗಸ್ಟ್ 2024, 11:34 IST
ಅಕ್ಷರ ಗಾತ್ರ

ನವದೆಹಲಿ: ರದ್ದುಗೊಂಡ ವಿಮಾನದ ಪ್ರಯಾಣಿಕರಿಗೆ ಪರಿಹಾರ ನೀಡದ ಟಾಟಾ ಒಡೆತನದ ಏರ್‌ ಇಂಡಿಯಾ ವಿಮಾನ ಸಂಸ್ಥೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ₹10 ಲಕ್ಷ ದಂಡ ವಿಧಿಸಿದೆ.

ಜೂನ್‌ ತಿಂಗಳಿನಲ್ಲಿ ಡಿಜಿಸಿಎ ನಡೆಸಿದ ನಿಗದಿತ ದೇಶೀಯ ನಿರ್ವಾಹಕರ ವಾರ್ಷಿಕ ಕಣ್ಗಾವಲು ಕಾರ್ಯಕ್ರಮದಲ್ಲಿ ನಡೆಸಿದ ತಪಾಸಣೆ ವೇಳೆ ಪ್ರಯಾಣಿಕರಿಗೆ ಪರಿಹಾರ ಪಾವತಿ ಮಾಡದಿರುವುದು ಪತ್ತೆಯಾಗಿತ್ತು. ಹೀಗಾಗಿ ಏರ್‌ ಇಂಡಿಯಾಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು.

ವಿಮಾನಗಳ ರದ್ದತಿಯಿಂದಾಗಿ ತೊಂದರೆಗೊಳಗಾದ ಪ್ರಯಾಣಿಕರಿಗೆ ಪರಿಹಾರವನ್ನು ಒದಗಿಸುವ ನಿಬಂಧನೆಗಳನ್ನು ಅದು ಪಾಲಿಸಿಲ್ಲ ಎಂದು ಏರ್‌ ಇಂಡಿಯಾದ ಉತ್ತರದಿಂದ ತಿಳಿದುಬಂದಿದೆ ಎಂದು ಡಿಜಿಸಿಎ ಹೇಳಿದೆ.

ಹೀಗಾಗಿ ಏರ್‌ ಇಂಡಿಯಾಗೆ ₹10 ಲಕ್ಷ ದಂಡ ವಿಧಿಸಲಾಗಿದೆ. ಯಾವ ನಿಯಮವನ್ನು ಉಲ್ಲಂಘಿಸಲಾಗಿದೆ ಎನ್ನುವುದರ ಬಗ್ಗೆ ನಿಖರ ಮಾಹಿತಿ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT