ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ | ಹೂಡಿಕೆ ನೆಪದಲ್ಲಿ ವಂಚನೆ: ₹80 ಲಕ್ಷ ಕಳೆದುಕೊಂಡ ವೈದ್ಯ

Published 7 ಮಾರ್ಚ್ 2024, 2:37 IST
Last Updated 7 ಮಾರ್ಚ್ 2024, 2:37 IST
ಅಕ್ಷರ ಗಾತ್ರ

ಮುಂಬೈ: ಹೂಡಿಕೆ ಮೇಲೆ ಆಕರ್ಷಕ ಲಾಭ ನೀಡುವುದಾಗಿ ನಂಬಿಸಿ 65 ವರ್ಷದ ವೈದ್ಯರೊಬ್ಬರಿಗೆ ₹80 ಲಕ್ಷ ಮೋಸ ಮಾಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಬುಧವಾರ ಹೇಳಿದ್ದಾರೆ.

ಕುರ್ಲಾ ಉಪನಗರದ ನಿವಾಸಿ ಶರಿಯಾರ್‌ ಛತ್ತಿರ್‌ವಾಲ ಅಲಿಯಾಸ್‌ ಶೊಯಬ್ ಮೆಮೊನ್ ಎಂಬಾತ, ವೈದ್ಯ ಘನಶ್ಯಾಮ ವರ್ಮಾ ಅವರಿಂದ ಹೂಡಿಕೆ ಹೆಸರಿನಲ್ಲಿ ಕಳೆದ ಆರು ವರ್ಷಗಳಲ್ಲಿ ಹಲವು ಬಾರಿ ಹಣ ಪಡೆದುಕೊಂಡು ವಂಚಿಸಿದ್ದಾನೆ.

ಮೆಮೊನ್‌ನನ್ನು ನಂಬಿದ್ದ ಘನಶ್ಯಾಮ, ತಮ್ಮ ಸಂಬಂಧಿಕರಿಂದ ಸಾಲ ಪಡೆದುಕೊಂಡಿದ್ದರು. ಮನೆಯನ್ನೂ ಮಾರಿ ಆರೋ‍ಪಿಗೆ ಹಣ ನೀಡಿದ್ದರು ಎಂದು ಪೊಲೀಸ್ ದೂರಿನಲ್ಲಿ ಹೇಳಲಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420ರಡಿ ದೂರು ದಾಖಲಾಗಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT