ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಉನ್ನಾವ್ ಸಂತ್ರಸ್ತೆ ತಂದೆಗೆ ಚಿಕಿತ್ಸೆ ನೀಡಿದ್ದ ವೈದ್ಯ ಸಾವು

Last Updated 14 ಜನವರಿ 2020, 14:43 IST
ಅಕ್ಷರ ಗಾತ್ರ

ಉನ್ನಾವ್:ಅತ್ಯಾಚಾರ ಸಂತ್ರಸ್ತೆಯ ತಂದೆಗೆ ಚಿಕಿತ್ಸೆ ನೀಡಿದ್ದ ವೈದ್ಯರು ಸೋಮವಾರ ಸಂಜೆ ಶಂಕಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪ್ರಶಾಂತ್ ಉಪಾಧ್ಯಾಯ (45) ಸಾವನ್ನಪ್ಪಿದ ವೈದ್ಯ. ಸುಸ್ತಿನಿಂದ ಬಳಲುತ್ತಿದ್ದ ಪ್ರಶಾಂತ್ ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಾರ್ಡ್‌ನಲ್ಲಿ ದಾಖಲಾಗಿದ್ದರು. ಅವರಿಗೆ ಸಕ್ಕರೆ ಕಾಯಿಲೆ ಇತ್ತು. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಕಸ್ಟಡಿಯಲ್ಲಿದ್ದಾಗ ಉನ್ನಾವ್ ಸಂತ್ರಸ್ತೆಯ ತಂದೆ ತೀವ್ರ ಥಳಿತಕ್ಕೊಳಗಾಗಿದ್ದರು. ಆಗ ಪ್ರಶಾಂತ್ ಸಂತ್ರಸ್ತೆಯ ತಂದೆಗೆ ಚಿಕಿತ್ಸೆ ನೀಡಿದ್ದರು. ಈ ಸಂಬಂಧ ಪ್ರಶಾಂತ್ ಅವರನ್ನು ಸಿಬಿಐ ತನಿಖೆಗೊಳಪಡಿಸಿತ್ತು. ಪ್ರಶಾಂತ್ ಪ್ರಸ್ತುತ ಫೌತೇಪುರ್‌ದಲ್ಲಿ ಕೆಲಸ ಮಾಡುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT