ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಕ್ ಉಗ್ರರು ಹಿಂದೂಗಳನ್ನು ಕೊಲ್ಲಲು ಬಿಡಬೇಡಿ: ಭಾರತಕ್ಕೆ ಸಲಹೆ ನೀಡಿದ ಡಚ್ ಸಂಸದ

Published 11 ಜೂನ್ 2024, 8:06 IST
Last Updated 11 ಜೂನ್ 2024, 8:06 IST
ಅಕ್ಷರ ಗಾತ್ರ

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಇದರಿಂದ ಬಸ್ ಕಣಿವೆಗೆ ಉರುಳಿಬಿದ್ದು 10 ಮಂದಿ ಮೃತಪಟ್ಟಿದ್ದರು. ಘಟನೆ ಬಗ್ಗೆ ಡಚ್‌ ಸಂಸದ, ’ಪಾರ್ಟಿ ಫಾರ್‌ ಫ್ರೀಡಂ’ನ ಮುಖ್ಯಸ್ಥ ಗೀರ್ಟ್‌ ವೈಲ್ಡರ್ಸ್‌ ಪ್ರತಿಕ್ರಿಯಿಸಿದ್ದಾರೆ.

'ಪಾಕಿಸ್ತಾನಿ ಭಯೋತ್ಪಾದಕರು ಕಾಶ್ಮೀರ ಕಣಿವೆಯಲ್ಲಿ ಹಿಂದೂಗಳನ್ನು ಕೊಲ್ಲಲು ಬೀಡಬೇಡಿ. ನಿಮ್ಮ ಜನರನ್ನು ರಕ್ಷಿಸಿಕೊಳ್ಳಿ' ಎಂದು ವೈಲ್ಡರ್ಸ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ

ಈ ಹಿಂದೆ ಪ್ರವಾದಿ ಮೊಹಮ್ಮದ್ ವಿರುದ್ಧದ ಹೇಳಿಕೆ ನೀಡಿದ್ದ ನೂಪುರ್‌ ಶರ್ಮಾ ಅವರ ಪರವಾಗಿಯೂ ಗೀರ್ಟ್‌ ವೈಲ್ಡರ್ಸ್‌ ಪೋಸ್ಟ್‌ ಮಾಡಿದ್ದರು. ಇದಕ್ಕಾಗಿ ತಮಗೆ ಬೆದರಿಕೆ ಸಂದೇಶಗಳು ಬಂದಿದ್ದಾಗಿ ಅವರು ಹೇಳಿಕೊಂಡಿದ್ದರು.

ನಾನು ನೂಪುರ್‌ ಶರ್ಮಾ ಅವರನ್ನು ಬೆಂಬಲಿಸಿದ್ದು. ನೂರಾರು ಕೊಲೆ ಬೆದರಿಕೆಗಳು ನನಗೆ ಬಂದಿವೆ. ಇವುಗಳು, ನಾನು ಮತ್ತಷ್ಟು ದೃಢವಾಗಿ ಮತ್ತು ಹೆಮ್ಮೆಯಿಂದ ಅವರನ್ನು ಬೆಂಬಲಿಸುವಂತೆ ಮಾಡಿವೆ. ಯಾಕೆಂದರೆ ಕೆಟ್ಟದ್ದು ಎಂದಿಗೂ ಗೆಲ್ಲಲಾರದು ಎಂದು ಗೀರ್ಟ್‌ ವೈಲ್ಡರ್ಸ್‌ ಬರೆದುಕೊಂಡಿದ್ದರು.

‘ನಾನು ಭಾರತೀಯನೂ ಅಲ್ಲ, ಹಿಂದುವೂ ಅಲ್ಲ. ಆದರೆ ನನಗೆ ಒಂದು ವಿಷಯ ಗೊತ್ತು. ಹಿಂದೂ ದೇವರುಗಳನ್ನು ಕೀಳಾಗಿ ಬಿಂಬಿಸುವುದನ್ನು ಸಮರ್ಥಿಸುವುದು ಹಾಗೂ ಪ್ರವಾದಿ ಬಗ್ಗೆ ಸತ್ಯ ಹೇಳುವುದೇ ತಪ್ಪು ಎಂಬ ವಾದವೇ ಜಾತ್ಯತೀತತೆ ಆಗಬಾರದು. ಹಿಂದೂ ದೇವರುಗಳನ್ನು ಕೀಳಾಗಿ ಬಿಂಬಿಸುವ ಸಂದರ್ಭದಲ್ಲಿ ನೂಪುರ್ ಶರ್ಮಾ ಪ್ರತಿಕ್ರಿಯಿಸಿರುವುದು ಸಂಪೂರ್ಣ ಸಮರ್ಥನೀಯ’ ಎಂದು ಗೀರ್ಟ್‌ ವೈಲ್ಡರ್ಸ್‌ ಪ್ರತಿಪಾದಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT