ಲಖೀಂಪುರ ಖೇರಿ (ಉ.ಪ್ರದೇಶ): ಆಧ್ಯಾತ್ಮಿಕ ಮತ್ತು ಪರಿಸರ ಪ್ರವಾಸೋದ್ಯಮಕ್ಕೆ ಡಬಲ್ ಎಂಜಿನ್ ಸರ್ಕಾರವು ಉತ್ತೇಜನ ನೀಡಲಿದ್ದು, ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು (ಶನಿವಾರ) ಹೇಳಿದ್ದಾರೆ.

ಲಖೀಂಪುರ ಖೇರಿಯ ಗೋಲ ಗೋಕರ್ಣನಾಥ ರಾಜೇಂದ್ರ ಗಿರಿ ಸ್ಮಾರಕ ಕ್ರೀಡಾಂಗಣದಲ್ಲಿ ₹1,622 ಕೋಟಿಯ 373 ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಈ ಮಹತ್ತರ ಯೋಜನೆಯಲ್ಲಿ ಗೋಲ ಗೋಕರ್ಣನಾಥ ಶಿವ ದೇವಾಲಯ ಕಾರಿಡಾರ್ ಸೇರಿದೆ.

ಈ ವೇಳೆ ಮಾತನಾಡಿದ ಆದಿತ್ಯನಾಥ್, 'ಲಖೀಂಪುರ ಖೇರಿ ಹಿಂದುಳಿದ ಜಿಲ್ಲೆಯಲ್ಲ. ಇಲ್ಲಿನ ಫಲವತ್ತಾದ ಭೂಮಿ ಚಿನ್ನದಂತೆ' ಎಂದು ಹೇಳಿದ್ದಾರೆ.

'ಕೇಂದ್ರ ಹಾಗೂ ರಾಜ್ಯ ಸೇರಿದಂತೆ ಡಬಲ್ ಎಂಜಿನ್ ಸರ್ಕಾರವು ಆಧ್ಯಾತ್ಮಿಕ ಹಾಗೂ ಪರಿಸರ ಪ್ರವಾಸೋದ್ಯಮದ ಅಭಿವೃದ್ಧಿಯನ್ನು ಹೆಚ್ಚಿಸಲಿದೆ. ಆ ಮೂಲಕ ಉದ್ಯೋಗದ ಅಭಾವ ಎದುರಾಗದಂತೆ ನೋಡಿಕೊಳ್ಳಲಿದೆ' ಎಂದು ಹೇಳಿದ್ದಾರೆ.
.ಮಹಾ ಕುಂಭ, ಸನಾತನ ಧರ್ಮಕ್ಕೆ ಅಗೌರವ ಸಹಿಸಲ್ಲ: ಯೋಗಿ ಆದಿತ್ಯನಾಥ್ .ಕುಂಭಮೇಳದ ಕುರಿತು ಆರೋಪ ಆಧಾರರಹಿತ: ಯೋಗಿ ಆದಿತ್ಯನಾಥ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.