ಲಖನೌ: ‘ಸುಳ್ಳಿನ ಸಂಕಥನಗಳಿಂದ ಮಹಾ ಕುಂಭಕ್ಕೆ ಮತ್ತು ಸನಾತನ ಧರ್ಮಕ್ಕೆ ಅಗೌರವ ತೋರುವ ಪ್ರತಿಪಕ್ಷಗಳ ಯತ್ನಗಳನ್ನು ಸಹಿಸುವುದಿಲ್ಲ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ಹೇಳಿದ್ದಾರೆ.

ರಾಜ್ಯ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಮಹಾ ಕುಂಭಮೇಳವು ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ, ಬದಲಾಗಿ ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಸಂಕೇತವಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದ ಬಗ್ಗೆ ವಿರೋಧ ಪಕ್ಷದವರು ಸುಳ್ಳು ಮಾಹಿತಿ ಹರಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ‘ಸನಾತನ ಧರ್ಮವು ಭಾರತದ ಆತ್ಮವಾಗಿದೆ. ಅದರ ಘನತೆ ಎತ್ತಿಹಿಡಿಯುವುದು ನಮ್ಮ ಆದ್ಯಕರ್ತವ್ಯ. ಮಹಾ ಕುಂಭವು ಭಾರತೀಯ ಸಂಸ್ಕೃತಿಯ ಹೆಮ್ಮೆ. ಇದನ್ನು ಐತಿಹಾಸಿಕ ಮತ್ತು ಭವ್ಯವಾಗಿಸಲು ತಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಹೇಳಿದರು.

ವರದಿ ಅಲ್ಲಗಳೆದ ಯೋಗಿ:

ಪ್ರಯಾಗರಾಜ್ದಲ್ಲಿನ ನದಿ ನೀರುನೀರು ಸ್ನಾನಕ್ಕೆ ಯೋಗ್ಯವಾಗಿಲ್ಲ ಎಂಬ ವರದಿಗಳನ್ನು ಯೋಗಿ ಆದಿತ್ಯನಾಥ ಅಲ್ಲಗಳೆದಿದ್ದಾರೆ.

ಇತ್ತೀಚಿನ ಕೆಲವು ವರದಿಗಳಿಂದ ದೃಢಪಟ್ಟಿರುವಂತೆ, ಸಂಗಮದ ನೀರು ಸ್ನಾನ ಮತ್ತು ಧಾರ್ಮಿಕ ಪಾನೀಯ ಎರಡಕ್ಕೂ ಯೋಗ್ಯವಾಗಿದೆ. ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಸಂಗಮದಲ್ಲಿನ ನೀರಿನ ಗುಣಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಅವರು ರಾಜ್ಯ ವಿಧಾನಸಭೆಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.