ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಂಡಲ ಬ್ಯಾಂಕ್‌ ಹಗರಣ: ಎರಡನೇ ದಿನಕ್ಕೆ ಇ.ಡಿ ಶೋಧ

Published 9 ನವೆಂಬರ್ 2023, 10:48 IST
Last Updated 9 ನವೆಂಬರ್ 2023, 10:48 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳದ ಕಂಡಲ ಸೇವಾ ಸಹಕಾರಿ ಬ್ಯಾಂಕ್‌ ಮೇಲೆ ಬುಧವಾರ ದಾಳಿ ನಡೆಸಿದಿದ್ದ ಜಾರಿ ನಿರ್ದೇಶನಾಲಯ ಗುರುವಾರವೂ ಪರಿಶೀಲನೆ ಮುಂದುವರಿಸಿತು. 

ಕಾಟ್ಟಕ್ಕಡದಲ್ಲಿರುವ ಬ್ಯಾಂಕ್‌ ಮತ್ತು ಅದಕ್ಕೆ ಸಂಬಂಧಿಸಿದ ಇತರ ಸ್ಥಳಗಳು, ಬ್ಯಾಂಕ್‌ನ ಮಾಜಿ ಅಧ್ಯಕ್ಷ, ಸಿಪಿಐ ನಾಯಕ ಎನ್‌. ಭಾಸುರಾಂಗನ್‌ ಅವರ ನಿವಾಸಗಳಲ್ಲಿ ಶೋಧ ನಡೆಯುತ್ತಿದೆ. 

ಇ.ಡಿ ದಾಳಿಯ ಭಾಗವಾಗಿ ಭಾಸುರಾಂಗನ್‌ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಅವರು ಅಸ್ವಸ್ಥರಾಗಿದ್ದರಿಂದ  ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಾಳಿ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಿಪಿಐನ ಜಿಲ್ಲಾ ಘಟಕ, ‘ಭಾಸುರಾಂಗನ್‌ ಅವರ ವಿರುದ್ಧ ಹಿಂದೆಯೇ ಕ್ರಮ ಕೈಗೊಳ್ಳಲಾಗಿದೆ. ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೂ ಉಚ್ಚಾಟಿಸಲಾಗಿದೆ‘ ಎಂದು ತಿಳಿಸಿದೆ.

ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ಭಾಸುರಾಂಗನ್‌ ಮತ್ತು ಇತರ ಅಧಿಕಾರಿಗಳು ಬ್ಯಾಂಕ್‌ನಲ್ಲಿ ಬಹುಕೋಟಿ ಮೊತ್ತದ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇ.ಡಿ ದಾಳಿ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT