ರಾಂಚಿ: ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರ್ಖಂಡ್, ದೆಹಲಿ ಮತ್ತು ಪಶ್ಚಿಮ ಬಂಗಾಳದ 21 ಸ್ಥಳಗಳ ಮೇಲೆ ಇಂದು (ಶುಕ್ರವಾರ) ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಜಾರ್ಖಂಡ್ನ ಮಾಜಿ ಆರೋಗ್ಯ ಸಚಿವ ಬನ್ನಾ ಗುಪ್ತಾ ಅವರ ಖಾಸಗಿ ಕಾರ್ಯದರ್ಶಿ ಕಚೇರಿ, ಜಾರ್ಖಂಡ್ ರಾಜ್ಯ ಆರೋಗ್ಯ ಸೊಸೈಟಿ (ಜೆಎಸ್ಎಎಸ್) ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಇಂದು ಮುಂಜಾನೆ ದಾಳಿ ನಡೆಸಲಾಗಿದೆ.

ರಾಂಚಿಯ ಅಶೋಕ್ ನಗರ, ಬರಿಯಾಟು ಮತ್ತು ಜೆಮ್ಶೆಡ್ಪುರದಲ್ಲಿನ ಕೆಲವು ಮನೆಗಳು ಮತ್ತು ನರ್ಸಿಂಗ್ ಹೋಂಗಳ ಮೇಲೆಯೂ ಇ.ಡಿ ದಾಳಿ ನಡೆಸಿದೆ ಎಂದು ಮೂಲಗಳು ಹೇಳಿವೆ.

ಕೋಲ್ಕತ್ತದಲ್ಲಿ ಕೆಲವು ಎಂಟ್ರಿ ಆಪರೇಟರ್ಗಳು ಮತ್ತು ಹವಾಲಾ ಡೀಲರ್ಗಳ ಕಚೇರಿಗಳಲ್ಲಿಯೂ ಶೋಧ ನಡೆಸಲಾಗಿದೆ.

‘ಆಯುಷ್ಮಾನ್ ಭಾರತ್’ ಕೇಂದ್ರ ಸರ್ಕಾರದ ಒಂದು ಪ್ರಮುಖ ಯೋಜನೆಯಾಗಿದ್ದು, ಇದು ನಾಗರಿಕರಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
.ಜನವರಿಯಿಂದ 682 ಭಾರತೀಯರು ಅಮೆರಿಕದಿಂದ ಗಡೀಪಾರು: ಎಂಇಎ.Waqf Bill | ಭ್ರಷ್ಟಾಚಾರ ತೊಡೆದುಹಾಕುವತ್ತ ಮಹತ್ವದ ಹೆಜ್ಜೆಯಾಗಿದೆ: ಆದಿತ್ಯನಾಥ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.