ಕಾಸರಗೋಡು: ಕೇರಳದ ಕಾಸರಗೋಡಿನಲ್ಲಿ ಮುಸ್ಲಿಂ ಸಮುದಾಯದವರು ಈದ್ ಮಿಲಾದ್ ಮೆರವಣಿಗೆ ವೇಳೆ ದೇವಾಲಯಕ್ಕೆ ವಿಶೇಷ ಗೌರವ ಸಲ್ಲಿಸಿದ್ದು ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಪಾಲಕುನ್ನುವಿನಲ್ಲಿರುವ ಕೊಟ್ಟಿಕುಲಂ ನೂರುಲ್ ಹುದಾ ಮದರಸಾ ಆಯೋಜಿಸಿದ್ದ ಈದ್ ಮಿಲಾದ್ ಮೆರವಣಿಗೆ ವೇಳೆ ಕಜಕಂ ಭಗವತಿ ದೇವಸ್ಥಾನಕ್ಕೆ ವಿಶೇಷ ಗೌರವ ಸಲ್ಲಿಸಲಾಗಿದೆ. ಅನಿಶಿತ್ ಎಂಬವರು ಗೌರವ ಸಲ್ಲಿಸುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಇದು ಕೇರಳ, ಇಲ್ಲಿ ವೈವಿಧ್ಯತೆಯಲ್ಲಿ ಏಕತೆ ಇದೆ. ಮುಸ್ಲಿಮರು ಹಿಂದೂ ದೇವಾಲಯಕ್ಕೆ ವಂದನೆ ಸಲ್ಲಿಸುವುದು, ಧರ್ಮಗಳ ನಡುವೆ ಗೌರವ ಮತ್ತು ಸಾಮರಸ್ಯ ತೋರಿಸುತ್ತದೆ ಎಂದು ಹೇಳಿದ್ದಾರೆ.

ಓಣಂ ಹಬ್ಬ ಮತ್ತು ಈದ್ ಮಿಲಾದ್ ಜೊತೆಜೊತೆಯಲ್ಲೇ ಬಂದಿದ್ದು, ಕೇರಳದ ಹಲವಾರು ಭಾಗಗಳು ಕೋಮು ಸೌಹಾರ್ದತೆಯ ನಿದರ್ಶನಗಳು ಕಂಡುಬಂದಿವೆ.

ಇಂತಹ ಘಟನೆಗಳ ಕುರಿತು, ಇದು ನಿಜವಾದ ಕೇರಳ ಸ್ಟೋರಿ, ಇದು ನಿಜವಾದ ಭಾರತ ಎಂದು ನೆಟ್ಟಿಗರು ಸಾಮಾಜಿಕ ಮಾಧ್ಯಮಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
.ಈದ್ ಮಿಲಾದ್: ಪೈಗಂಬರರ ಸಂದೇಶ ಜಪ.ಓಣಂ ಪೂಕ್ಕಳಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.