ಕೋಲ್ಕತ್ತ: ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್, ಭಾರತ ಕ್ರಿಕೆಟ್ ತಂಡದ ಆಟಗಾರ ಮೊಹಮ್ಮದ್ ಶಮಿ ಹಾಗೂ ಬೆಂಗಾಲಿ ನಟ, ಸಂಸದ ದೇವ್ ಅವರಿಗೆ ಎಸ್ಐಆರ್ ವಿಚಾರಣೆಗೆ ನೋಟಿಸ್ ನೀಡಿದ್ದು ನಿಯಮಿತ ಚುನಾವಣಾ ಪರಿಶೀಲನಾ ಪ್ರಕ್ರಿಯೆ ಭಾಗವಾಗಿ ಎಂದು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಆಯುಕ್ತ ಸ್ಪಷ್ಟೀಕರಣ ನೀಡಿದ್ದಾರೆ.
.ಉತ್ತರ ಪ್ರದೇಶ ಎಸ್ಐಆರ್: 2.89 ಕೋಟಿ ಜನರ ಹೆಸರನ್ನು ಕೈಬಿಟ್ಟ ಚುನಾವಣಾ ಆಯೋಗ.
ಖ್ಯಾತನಾಮರಿಗೆ ನೋಟಿಸ್ ನೀಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು.

‘ಕಡ್ಡಾಯವಾಗಿ ತುಂಬಬೇಕಾದ ವಿಷಯಗಳನ್ನು ಖಾಲಿ ಬಿಟ್ಟಿದ್ದು ಪರಿಶೀಲನೆ ವೇಳೆ ಗೊತ್ತಾಗಿದ್ದರಿಂದ ನೋಟಿಸ್ ನೀಡಲಾಗಿದೆ’ ಎಂದು ಚುನಾವಣಾ ಅಧಿಕಾರಿ ಬಿಡುಗಡೆ ಮಾಡಿದ ಸ್ಪಷ್ಟೀಕರಣದಲ್ಲಿ ಹೇಳಲಾಗಿದೆ.

ಇಂತಹ ಪ್ರಕರಣದಲ್ಲಿ ಇವರನ್ನು ಸೇರಿ ಹಲವು ಮಂದಿಯನ್ನು ವಿಚಾರಣೆಗೆ ಕರೆಯಲಾಗಿದೆ ಎಂದು ಹೇಳಲಾಗಿದೆ.
.ಲೋಕಸಭೆ | ಚುನಾವಣಾ ಆಯೋಗಕ್ಕೆ ಎಸ್ಐಆರ್ ನಡೆಸುವ ಅಧಿಕಾರ ಇಲ್ಲ: ಮನೀಶ್ ತಿವಾರಿ.
ವಿದೇಶಿ ಮತದಾರ ಎಂದು ನಮೂನೆಯಲ್ಲಿ ತಿಳಿಸಿದ್ದಾರೆ. ಅವರ ಕುಟುಂಬ ಸದಸ್ಯರಾದ ಶಾಂತಭಾನು ಸೇನ್ ಅವರು ನಮೂನೆಯನ್ನು ಸ್ವೀಕರಿಸಿದ್ದಾರೆ. ಅವರ ತಾಯಿ ಅಮಿತಾ ಸೇನ್ ಅವರೊಂದಿಗೆ ಜೋಡಿಸಲಾಗಿದೆ ಎಂದು ಅಮರ್ತ್ಯ ಸೇನ್ ಪ್ರಕರಣದಲ್ಲಿ ಆಯೋಗ ಮಾಹಿತಿ ನೀಡಿದೆ.

‘ಮತದಾರ ಹಾಗೂ ಅವರ ತಾಯಿಯ ವಯಸ್ಸಿನ ಅಂತರ 15 ವರ್ಷ ಮಾತ್ರ. ಈ ತಾರ್ಕಿಕ ವ್ಯತ್ಯಾಸವನ್ನು ಇಆರ್ಒ ನೆಟ್ ಪೋರ್ಟಲ್ ಗುರುತಿಸಿದೆ. ಹೀಗಾಗಿ ಸೇನ್ ಅವರಿಗೆ ನೋಟಿಸ್ ನೀಡಲಾಗಿದೆ’ ಎಂದು ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.
.ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ: ವಿಚಾರಣೆಗೆ ಹಾಜರಾಗಲು ಮೊಹಮ್ಮದ್ ಶಮಿಗೆ ಸೂಚನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.